ತಕ್ಷಣವೇ 7ಟಿಎಂಸಿ ನೀರು ಹರಿಸುವಂತೆ ಮತ್ತೆ ತಮಿಳುನಾಡು ಕ್ಯಾತೆ

ಈ ಸುದ್ದಿಯನ್ನು ಶೇರ್ ಮಾಡಿ

Palanaswamy
ಬೆಂಗಳೂರು,ಜ.13- ತಕ್ಷಣವೇ 7ಟಿಎಂಸಿ ನೀರು ಹರಿಸಿ ಮತ್ತು 15ದಿನದೊಳಗೆ 61 ಟಿಎಂಸಿ ನೀರು ಬಿಡಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಕರ್ನಾಟಕ ಸಿಎಂಗೆ ಪತ್ರ ಬರೆದಿದ್ದಾರೆ. ಮಕರ ಸಂಕ್ರಾಂತಿಯ ಶುಭಾಷಯ ಹೇಳಿರುವ ಅವರು, ಜೊತೆಯಲ್ಲಿಯೇ ನೀರಿನ ಕ್ಯಾತೆ ತೆಗೆದಿದ್ದಾರೆ. ಜನವರಿ 9ರವರೆಗೆ 111.647 ಟಿಎಂಸಿ ನೀರು ಮಾತ್ರ ಹರಿಸಿದ್ದು, ಇನ್ನೂ 61 ಟಿಎಂಸಿ ನೀರನ್ನು 15 ದಿನದೊಳಗಾಗಿ ಬಿಡಬೇಕು. ತಕ್ಷಣವೇ 7ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.

Facebook Comments

Sri Raghav

Admin