ಪಿಸ್ತೂಲು ತೋರಿಸಿ ಪ್ರತಿಷ್ಠಿತ ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arest--01
ಬೆಂಗಳೂರು. ಜ. 13 : ಪಿಸ್ತೂಲು ತೋರಿಸಿ ಬೆದರಿಸಿ ಹಣಕ್ಕಾಗಿ ಪ್ರತಿಷ್ಠಿತ ವ್ಯಕ್ತಿಯೊಬ್ಬರನ್ನು ಅಪಹರಿಸಿ ಸುಮಾರು 60 ಲಕ್ಷ ಹಣ ಮತ್ತು 3 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿದ್ದ ಅಪಹರಣಕಾರರನ್ನು ಬೆಂಗಳೂರು ನಗರ ಈಶಾನ್ಯ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ .   ಯಲಹಂಕ ನಿವಾಸಿ ಮಲ್ಲಿಕಾರ್ಜುನಪ್ಪ ಎಂಬುವವರನ್ನು ನಿನ್ನೆ ಪಿಸ್ತೂಲು ತೋರಿಸಿ ಹೆದರಿಸಿ ಅಪಹರಿಸಿ ಅವರ ಬಳಿಯಿದ್ದ ಒಂದು ಚಿನ್ನದ ಸರ , 2 ಉಂಗುರ ಹಾಗೂ ಮೊಬೈಲ್ ನ್ನು ಕಿತ್ತುಕೊಂಡು 100 ಕೋಟಿ ಹಣ ನೀಡುವಂತೆ ಮಲ್ಲಿಕಾರ್ಜುನಪ್ಪ ಅವರ ಮಗನಿಗೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮಲ್ಲಿಕಾರ್ಜುನಪ್ಪ ಅವರ ಮಗ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂತರಾಜ್ ಗೌಡ, ರೇಣುಕಾ ಪ್ರಸಾದ್ ಅರ್ಶಿಯಾ ಮತ್ತು ಪ್ರದೀಪ್ ಬಂಧಿತ ಆರೋಪಿಗಳು. ಪೊಲೀಸರು ಬಂಧಿತರಿಂದ ಹಣ ಮತ್ತು ಒಡವೆಗಳನ್ನು ವಶಕ್ಕೆ ಪಡೆದಿದ್ದಾರೆ.

Facebook Comments

Sri Raghav

Admin