7 ಜನರಿದ್ದ ಪವನ್ ಹಂಸ ಹೆಲಿಕಾಪ್ಟರ್ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Pawan-Hans-02
ಮುಂಬೈ, ಜ.13-ಏಳು ಜನರಿದ್ದ ಪವನ ಹಂಸ ಹೆಲಿಕಾಪ್ಟರ್ ಮುಂಬೈ ಕರಾವಳಿಯಲ್ಲಿ ಇಂದು ನಾಪತ್ತೆಯಾಗಿದೆ. ಈ ಹೆಲಿಕಾಪ್ಟರ್‍ನಲ್ಲಿ ಐವರು ಒಎನ್‍ಜಿಸಿ ಉದ್ಯೋಗಿಗಳು ಮತ್ತು ಇಬ್ಬರು ಚಾಲನಾ ಸಿಬ್ಬಂದಿ ಇದ್ದರು. ಇಂದು ಬೆಳಗ್ಗೆ ಜುಹು ಏರ್‍ಪೋರ್ಟ್‍ನಿಂದ ಮೇಲೇರಿದ ಹಲಿಕಾಪ್ಟರ್ (ವಿಡಿ ಪಿಡಬ್ಲ್ಯಿಎ) ನಿಗದಿಯಂತೆ ತೈಲ ಬಾವಿ ಪ್ರದೇಶದ ಹೆಲಿಪ್ಯಾಡ್‍ನಲ್ಲಿ ಇಳಿಯಲಿಲ್ಲ. ಹೆಲಿಕಾಪ್ಟರ್ ನಾಪತ್ತೆಯಾಗಿದ್ದು, ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆ ತೀವ್ರ ಶೋಧ ನಡೆಸುತ್ತಿವೆ. ಒಎನ್‍ಜಿಸಿಯ ಐವರು ಅಧಿಕಾರಿಗಳು ಮತ್ತು ಇಬ್ಬರು ಪೈಲೆಟ್‍ಗಳಿದ್ದ ಈ ಹೆಲಿಕಾಪ್ಟರ್ ಬೆಳಗ್ಗೆ 10.30ರಿಂದ ವಾಯ ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಳೆದುಕೊಂಡಿದೆ.

Facebook Comments

Sri Raghav

Admin