ಮಾಜಿ ಅಂತಾರಾಷ್ಟ್ರೀಯ ಬಾಕ್ಸರ್ ನ ಭೀಕರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Boxer-02
ಗ್ರೇಟರ್ ನೊಯ್ಡಾ, ಜ.13-ಅಂತಾರಾಷ್ಟ್ರೀಯ ಮಾಜಿ ಬಾಕ್ಸರ್ ಜಿತೇಂದ್ರ ಮಾನ್(27) ಅವರ ಮೇಲೆ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ರಾಜಧಾನಿ ದೆಹಲಿ ಸಮೀಪದ ಗ್ರೇಟರ್ ನೊಯ್ಡಾದ ಅವರ ಅಪಾರ್ಟ್‍ಮೆಂಟ್‍ನಲ್ಲಿ ಗುಂಡೇಟು ಬಿದ್ದಿರುವ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.   ಉಜ್ಬೇಕಿಸ್ತಾನ, ಕ್ಯೂಬಾ ಫ್ರಾನ್ ಮತ್ತು ರಷ್ಯಾ ದೇಶಗಳಲ್ಲಿ ನಡೆದ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಜಿತೇಂದ್ರ ನೊಯ್ಡಾದ ಆಲ್ಫಾ ಸೆಕ್ಟರ್‍ನ ಜಿಮ್ ಒಂದರಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಜನವರಿ 10ರಂದು ಬೆಳಗ್ಗೆ ಎಂದಿನಂತೆ ಜಿಮ್‍ಗೆ ತೆರಳಿದ್ದ ಜಿತೇಂದ್ರ ಅವರು ಪತ್ತೆಯಾಗಲಿಲ್ಲ. ಅವರ ಮೊಬೈಲ್ ಫೋನ್ ಸ್ವೀಚ್ ಆಫ್ ಆಗಿತ್ತು. ಅವರನ್ನು ಸಂಪರ್ಕಿಸಲು ವಿಫಲರಾದ ಅವರ ಹಿತೈಷಿ ಪ್ರೀತಂ ಟೋಕಾಸ್, ಅಪಾರ್ಟ್‍ಮೆಂಟ್‍ಗೆ ಬಂದರು. ತಮ್ಮ ಬಳಿ ಇದ್ದ ಇನ್ನೊಂದು ಕೀಲಿ ಕೈಯಿಂದ ಬಾಗಿಲು ತೆರೆದು ನೋಡಿದಾಗ ಮಾಜಿ ಬಾಕ್ಸರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.    ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ.

Facebook Comments

Sri Raghav

Admin