ವಿಧಾನಸೌಧ ಪೊಲೀಸರ ಅತಿಥಿಯಾಗಿದ್ದ ಇಲಿಯಾಸ್

ಈ ಸುದ್ದಿಯನ್ನು ಶೇರ್ ಮಾಡಿ

Ilias - Mangalore

ಬೆಂಗಳೂರು, ಜ.13- ಮಂಗಳೂರಿನಲ್ಲಿ ಭೀಕರವಾಗಿ ಕೊಲೆಯಾಗಿರುವ ಟಾರ್ಗೆಟ್ ಗ್ರೂಪ್ ಸದಸ್ಯ ಇಲಿಯಾಸ್ ಬೆಂಗಳೂರಿನಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರ ಅತಿಥಿಯಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ನವೆಂಬರ್ 29ರಂದು ಅಶೋಕನಗರ ಪೊಲೀಸ್ ಠಾಣೆಯ ಬಾರ್‍ನಲ್ಲಿ ಬಿಯರ್ ಚೆಲ್ಲಿದ ವಿಚಾರದಲ್ಲಿ ಇಬ್ಬರು ಗ್ರಾಹಕರ ನಡುವೆ ಗಲಾಟೆಯಾಗಿತ್ತು.

ಬಾರ್ ಮಾಲೀಕನ ಸ್ನೇಹಿತನಾಗಿದ್ದ ಇಲಿಯಾಸ್ ಮತ್ತು ಆತನ ಗ್ಯಾಂಗ್ ಅದೇ ಬಾರ್‍ನಲ್ಲಿದ್ದರು. ಗ್ರಾಹಕರಿಬ್ಬರ ನಡುವಿನ ಜಗಳ ಬಿಡಿಸಲು ಇಲಿಯಾಸ್ ಮುಂದಾದಾಗ ಗ್ರಾಹಕರು ಈತನ ವಿರುದ್ಧವೇ ತಿರುಗಿ ಬಿದ್ದು ಆವಾಜ್ ಹಾಕಿದ್ದರು. ತಮ್ಮ ಬಾಸ್‍ಗೆ ಆವಾಜ್ ಹಾಕಿದ್ದ ಪ್ರವೀಣ್ ಮತ್ತು ಪ್ರದೀಪ್ ಎಂಬುವರನ್ನು ಚೇಸ್ ಮಾಡಿಕೊಂಡು ಬಂದ ಇಲಿಯಾಸ್ ಬೆಂಬಲಿಗರು ವಿಧಾನಸೌಧ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ತಿಮ್ಮಯ್ಯ ಸರ್ಕಲ್‍ನಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ವಿಧಾನಸೌಧ ಪೊಲೀಸರು ಇಲಿಯಾಸ್ ಬೆಂಬಲಿಗರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ಸಂದರ್ಭದಲ್ಲಿ ಘಟನೆಗೆ ಇಲಿಯಾಸ್ ಕಾರಣ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಂಗಳೂರಿಗೆ ದೌಡಾಯಿಸಿದ್ದ ವಿಧಾನಸೌಧ ಪೊಲೀಸರು ಅಲ್ಲಿನ ಜೈಲಿನಲ್ಲಿದ್ದ ಇಲಿಯಾಸ್‍ನನ್ನು ಬಾಡಿ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆತಂದು 6.12.2017ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

Facebook Comments

Sri Raghav

Admin