ಸಸ್ಪೆನ್ಸ್ ಆಗಿ ಥಿಯೇಟರ್ ಗೆ ಬರಲು ರೆಡಿಯಾದ ‘ಜವ’

ಈ ಸುದ್ದಿಯನ್ನು ಶೇರ್ ಮಾಡಿ

java-1

ಇತ್ತೀಚೆಗೆ ಬರುತ್ತಿರುವ ಬಹಳಷ್ಟು ಚಿತ್ರಗಳು ವಿಭಿನ್ನ ಕಥಾಹಂದರ ಹಾಗೂ ಶೀರ್ಷಿಕೆಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಮುಂದಾಗುತ್ತಿವೆ. ಆ ನಿಟ್ಟಿನಲ್ಲಿ ಜವ ಕೂಡ ಹಿಂದೆ ಬಿದ್ದಿಲ್ಲ. ಒಂದು ಹೊಸ ರೀತಿಯ ಫಾರ್ಮುಲಾಗಳನ್ನು ಬಳಸಿಕೊಳ್ಳುತ್ತಾ ಬಂದಿರುವಂತಹ ಚಿತ್ರ ಜವ. ನಾವು ಮಾಡಿದಂಥ ಪಾಪ ಕರ್ಮಗಳ ಫಲವನ್ನು ಇದೇ ಜನ್ಮದಲ್ಲಿ ಅನುಭವಿಸುತ್ತೇವೆ ಎಂಬ ಥೀಮ್ ಇಟ್ಟುಕೊಂಡು ನಿರ್ಮಿಸಲಾಗಿರುವ ಜವ ಚಿತ್ರವನ್ನು ಅಭಯ್‍ಚಂದ್ರ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇವರು ಹಿರಿಯ ಪತ್ರಕರ್ತ ಸುರೇಶ್ಚಂದ್ರ ಅವರ ಸುಪುತ್ರ. ಇವರ ಮತ್ತೊಬ್ಬ ಪುತ್ರ ವಿನಯ್ ಚಂದ್ರ ಸಂಗೀತವನ್ನು ಒದಗಿಸಿದ್ದಾರೆ. ಜತೆಗೆ ಕಾರ್ಯ ಕಾರಿ ನಿರ್ಮಾಪಕರಾಗಿ ಕೂಡ ಈ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರವಾಗಿ ಸಾಯಿಕುಮಾರ್ ಅಭಿನಯಿಸಿದ್ದಾರೆ. ಈ ಚಿತ್ರದ ಟ್ರೈಲರ್ ಅನಾವರಣ ಸಮಾರಂಭ ಶ್ರೀ ಚಾಮುಂಡೇಶ್ವರಿ ಥಿಯೇಟರಿನಲ್ಲಿ ನಡೆಯಿತು.

ನಟ ಸಾಯಿಕುಮಾರ್ ಚಿತ್ರದ ಬಗ್ಗೆ ಹಾಗೂ ತನ್ನ ಪಾತ್ರದ ಬಗ್ಗೆ ಮಾತನಾಡುತ್ತ ಅಭಯಚಂದ್ರ ಒಂದು ಕುತೂಹಲಕರ ಸಬ್ಜೆಕ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಇದೊಂದು ಸೈಕಲಾಜಿಕಲ್ , ಫಿಲಾಸಫಿಕಲ್ ಹಾಗೂ ಎಂಟರ್‍ಟೈನ್‍ಮೆಂಟ್ ಸಿನಿಮಾ. ನಾನು ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ಪೊಲೀಸ್ ಸ್ಟೋರಿ ನನಗೆ ದೊಡ್ಡ ಯಶಸ್ಸು ತಂದುಕೊಟ್ಟ ಚಿತ್ರ. ಅಂದಿನಿಂದ ಪೊಲೀಸ್ ಪಾತ್ರ ನನಗೆ ಪರ್ಮನೆಂಟಾಗಿದೆ. ಈ ಚಿತ್ರದಲ್ಲಿಯೂ ಒಬ್ಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದೇನೆ. ಈ ಚಿತ್ರ ತುಂಬಾ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದೆ ಎಂದು ಹೇಳಿದರು. ಪತ್ರಕರ್ತ ಸುರೇಶ್ಚಂದ್ರ ಮಾತನಾಡಿ, ನನ್ನ ಮಗ ಬಹಳ ದಿನಗಳಿಂದ ಒಂದು ಫಿಲಾಸಫಿ ಇಟ್ಟುಕೊಂಡಿದ್ದಾನೆ. ಅದನ್ನೇ ಈ ಚಿತ್ರದ ಮೂಲಕ ಹೇಳಿದ್ದಾನೆ. ಇದೇ 19 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಥಿಯೇಟರ್ ಸೆಟಪ್ ಆಗಿಲ್ಲ ಎಂಬ ಕಾರಣಕ್ಕೆ ಮುಂದಕ್ಕೆ ಹೋಗಿದೆ.

ನಿರ್ದೇಶಕ ಅಭಯ ಚಂದ್ರ ಮಾತನಾಡಿ, ಇದೊಂದು ಸಸ್ಪೆನ್ಸ್, ಥ್ರಿಲ್ಲರ್, ಮಿಸ್ಟ್ರಿ ಸಿನಿಮಾ. ಫೆಬ್ರವರಿ 2 ರಂದು ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು. ನಂತರ ಸಂಗೀತ ನಿರ್ದೇಶಕ ವಿನಯ್ ಚಂದ್ರ ಮಾತನಾಡಿ, ಚಿತ್ರದ ಬ್ಯಾಕ್‍ಗ್ರೌಂಡ್ ಸ್ಕೋರ್ ಬೇರೆ ಥರ ಟ್ರೈ ಮಾಡಿದ್ದೇನೆ. ಎಕ್ಸ್‍ಪೀರಿಮೆಂಟ್ ಮಾಡಲು ಅವಕಾಶವಿತ್ತು ಎಂದು ಹೇಳಿದರು. ಈ ಚಿತ್ರವನ್ನು ವಚನ್‍ಶೆಟ್ಟಿ ಹಾಗೂ ವೀರೇಂದ್ರ ವಿದ್ಯಾವರ್ತ್ ನಿರ್ಮಿಸಿದ್ದು, ಸಾಯಿಕುಮಾರ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಭವಾನಿ ಪ್ರಕಾಶ್, ನಾಗಿಣಿ ಭರಣ ಪ್ರಕಾಶ್, ಅಕ್ಷತಾ ಅಭನಯಿಸಿದ್ದಾರೆ. ಈ ಚಿತ್ರವನ್ನು ರಮೇಶ್‍ಬಾಬು ರವರು ವಿತರಣೆ ಮಾಡಲು ಮುಂದಾಗಿದ್ದಾರಂತೆ. ಎಲ್ಲಾ ಅಂದುಕೊಂಡಂತೆ ಚಿತ್ರ ಸಿದ್ಧವಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಟೀಸರ್ ಕೂಡ ಗಮನ ಸೆಳೆದಿದ್ದು,
ಮತ್ತಷ್ಟು ಅದ್ಧೂರಿ ಪ್ರಚಾರ ಮಾಡುವ ಮೂಲಕ ತೆರೆಗೆ ಬರಲು ಸಕಲ ಸಿದ್ಧತೆಗಳನ್ನು ಚಿತ್ರತಂಡ ಮಾಡಿ ಕೊಂಡಿದೆ.

Facebook Comments

Sri Raghav

Admin