ಸಹಕಾರ ಮಾರಾಟ ಮಹಾಮಂಡಲದಲ್ಲಿ ವಿವಿಧ ಉದ್ಯೋಗವಕಾಶಗಳು

ಈ ಸುದ್ದಿಯನ್ನು ಶೇರ್ ಮಾಡಿ

sahakara-maha-mandala

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ನಿಯಮಿತದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 163
ಹುದ್ದೆಗಳ ವಿವರ (ಹೈ-ಕ ಮೀಸಲಾತಿ ಸೇರಿ)
1.ಸಹಾಯಕ ಅಭಿಯಂತರರು – 02
2.ಶಾಖಾ ವ್ಯವಸ್ಥಾಪಕರು (ದರ್ಜೆ-1) -05
3.ಶಾಖಾ ವ್ಯವಸ್ಥಾಪಕರು (ದರ್ಜೆ-2) – 07
4.ಶಾಖಾ ವ್ಯವಸ್ಥಾಪಕರು (ದರ್ಜೆ-3) – 04
5.ಅಂತರಿಕ ಲೆಕ್ಕಪರಿಶೋಧಕರು – 05
6.ಹಿರಿಯ ಕಂಪ್ಯೂಟರ್ ಅನಾಲಿಸ್ಟ್ – 01
7.ಹಿರಿಯ ಸಹಾಯಕರು – 24
8.ಹಿರಿಯ ಲೆಕ್ಕ ಸಹಾಯಕರು – 12
9.ಶೀಘ್ರಲಿಪಿಗಾರರು – 02
10.ಕಿರಿಯ ಕಂಪ್ಯೂಟರ್ ಅನಾಲಿಸ್ಟ್ – 02
11.ಕಿರಿಯ ಸಹಾಯಕರು – 55
12.ಕಿರಿಯ ಲೆಕ್ಕ ಸಹಾಯಕರು – 25
13.4ನೇ ದರ್ಜೆಯ ನೌಕರರು – 19

ವಿದ್ಯಾರ್ಹತೆ :

ಕ್ರ.ಸಂ 1ರ ಹುದ್ದೆಗೆ ಬಿ.ಇ (ಸಿವಿಲ್) / ಬಿ.ಆರ್ಚ್, ಕ್ರ.ಸಂ 2,3,4,7,11ರ ಹುದ್ದೆಗೆ ಪದವಿ, ಕ್ರ.ಸಂ 5ರ ಹುದ್ದೆಗೆ ವಾಣಿಜ್ಯ ಪದವಿ, ಕ್ರ.ಸಂ 6ರ ಹುದ್ದೆಗೆ ಎಂಸಿಎ ಪದವಿ, ಕ್ರ.ಸಂ 8,12ರ ಹುದ್ದೆಗೆ ವಾಣಿಜ್ಯ/ಸಹಕಾರ/ವ್ಯವಸ್ಥಾಪನೆ ವಿಷಯದಲ್ಲಿ ಪದವಿ, ಕ್ರ.ಸಂ 9ರ ಹುದ್ದೆಗೆ ದ್ವಿತೀಯಾ ಪಿಯುಸಿ ಅಥವಾ 3 ವರ್ಷಗಳ ವಾಣಿಜ್ಯ ವ್ಯವಹಾರಗಳ ಡಿಪ್ಲೋಮಾ, ಕ್ರ.ಸಂ 10ರ ಹುದ್ದೆಗೆ ಬಿಸಿಎ ಕಂಪ್ಯೂಟರ್, ಕ್ರ.ಸಂ 13ರ ಹುದ್ದೆಗೆ ಎಸ್.ಎಸ್.ಎಲ್.ಸಿ ಉತೀರ್ಣರಾಗಿರಬೇಕು.

ವಯೋಮಿತಿ :

ಸಾಮಾನ್ಯ ವರ್ಗದವರಿಗೆ 18 ರಿಂದ 35 ªರ್ಷ, 2ಎ,2ಬಿ,3ಎ,3ಬಿ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ, ಪ್ರವರ್ಗ 1 ಇವರಿಗೆ 40 ವರ್ಷ ವಯೋಮಿತಿ ನಿಗದಿಮಾಡಲಾಗಿದೆ. ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಮತ್ತು ವಿಧವೆಯರಿಗೆ 10 ವರ್ಷಗಳ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಶುಲ್ಕ : ಸಾಮಾನ್ಯ ವರ್ಗದವರಿಗೆ ಕ್ರ.ಸಂ 1 ರಿಂದ 6ರ ಹುದ್ದೆಗೆ 1000 ರೂ, 7 ರಿಂದ 10ರ ಹುದ್ದೆಗೆ 800 ರೂ, 11 ಮತ್ತು 12ರ ಹುದ್ದೆಗೆ 600 ರೂ ಮತ್ತು 13ರ ಹುದ್ದೆಗೆ 400 ರೂ ನಿಗದಿ ಮಾಡಲಾಗಿದ್ದು, ಪ.ಜಾ,ಪ.ಪಂ,ಪ್ರವರ್ಗ-1, ಅಂಗವಿಕಲ ಮತ್ತು ಸೈನಿಕರಿಗೆ ಕ್ರಮವಾಗಿ 500 ರೂ, 400 ರೂ, 300 ರೂ ಹಾಗೂ 200 ರೂ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 02-02-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ ww.kscmfltd.com  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin