ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಐವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

Blast--02
ಜೈಪುರ್, ಜ.13-ಅಡುಗೆ ಅನಿಲ ಸ್ಫೋಟಗೊಂಡು ಬೆಂಕಿ ವ್ಯಾಪಿಸಿ ಒಂದೇ ಕುಟುಂಬದ ಐವರು ಮೃತಪಟ್ಟ ದಾರುಣ ಘಟನೆ ಮರುಭೂಮಿ ರಾಜ್ಯ ರಾಜಸ್ತಾನದ ರಾಜಧಾನಿ ಜೈಪುರದಲ್ಲಿ ಸಂಭವಿಸಿದೆ. ಜೈಪುರದ ವಿದ್ಯಾನಗರದ ಸೆಕ್ಟರ್-9ರ ಮನೆಯೊಂದರಲ್ಲಿ ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ. ಎಲ್‍ಪಿಜಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಇಡೀ ಮನೆಯನ್ನು ಆವರಿಸಿದ್ದರಿಂದ ಒಂದೇ ಕುಟುಂಬದ ಐವರು ಸಾವಿಗೀಡಾದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸಿಲಿಂಡರ್ ಸ್ಫೋಟ ಮತ್ತು ಬೆಂಕಿ ದುರಂತದ ಸುದ್ಧಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ನಂತರ ಐವರ ಮೃತದೇಹಗಳು ಪತ್ತೆಯಾದವು. ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

Facebook Comments

Sri Raghav

Admin