ಸೆನ್ಸಾರ್ ಬಾಗಿಲಿಗೆ ಬರಲು ಸಿದ್ಧವಾದ ‘ಕಿಲಾಡಿಗಳು’

ಈ ಸುದ್ದಿಯನ್ನು ಶೇರ್ ಮಾಡಿ

kiladigalu

ಇತ್ತೀಚೆಗೆ ಬರುತ್ತಿರುವ ಬಹುತೇಕ ಮಕ್ಕಳ ಚಿತ್ರಗಳು ಒಂದಲ್ಲ ಒಂದು ವಿಭಿನ್ನ ಅಂಶಗಳನ್ನು ಒಳಗೊಂಡಿದ್ದು , ಜನರ ಮನಸ್ಸನ್ನು ಸೆಳೆಯುತ್ತಿದೆ. ಆ ನಿಟ್ಟಿನಲ್ಲಿ ಈಗ ಕಿಲಾಡಿಗಳು ಬರುತ್ತಿದೆ. ಸುಮಾರು 26 ವರ್ಷಗಳ ಕಾಲ ಚಿತ್ರರಂಗದ ಹಲವು ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಹಳಷ್ಟು ಅನುಭವವನ್ನು ಪಡೆದುಕೊಳ್ಳುವ ಮೂಲಕ ಸ್ವತಂತ್ರ ನಿರ್ದೇಶಕರಾಗುವುದರ ಜತೆಗೆ ಚಿತ್ರವನ್ನು ನಿರ್ಮಿಸಿದ್ದಾರೆ ಯುವ ಪ್ರತಿಭೆ ಹರಿಹರನ್.

ಆರಂಭದಲ್ಲಿ ಗೆಳೆಯರೊಂದಿಗೆ ಸೇರಿ ಚಿತ್ರ ನಿರ್ಮಾಣ ಮಾಡಲು ಮುಂದಾದರು. ಹಂತ ಹಂತವಾಗಿ ಗೆಳೆಯರು ಹಿಂದೆ ಸರಿದಾಗ ಹೇಗೋ ಶ್ರಮ ವಹಿಸಿ ಸುಮಾರು 80 ದಿನಗಳ ಕಾಲ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಚಿತ್ರವನ್ನು ಚಿತ್ರೀಕರಿಸಿ ಈಗ ಸೆನ್ಸಾರ್ ಬಾಗಿಲಿಗೆ ಹೊರಡಲು ಸಿದ್ಧವಾಗಿದ್ದಾರೆ. ಇದೊಂದು ಮಕ್ಕಳ ಚಿತ್ರವಾಗಿದ್ದು , ಇತ್ತೀಚೆಗೆ ನಗರದಲ್ಲಿ ನಡೆಯುತ್ತಿರುವ ಮಕ್ಕಳ ಅಪಹರಣ ಕುರಿತಾದಂತಹ ಮುಖ್ಯ ಕಥಾ ಎಳೆಯನ್ನು ಆಯ್ದುಕೊಂಡು ಮಕ್ಕಳನ್ನು ಅಪರಾಧ ಚಟುವಟಿಕೆಗೆ ಬಳಸಿಕೊಳ್ಳುವುದು ಹಾಗೂ ಕೆಲಸಕ್ಕೆಂದು ಮಕ್ಕಳು ವಿದೇಶಕ್ಕೆ ಹೋದಾಗ ಇಲ್ಲಿ ತಂದೆ-ತಾಯಿಗಳು ಅನುಭವಿಸಿದ ವ್ಯಥೆಯನ್ನು ಕೂಡ ಈ ಚಿತ್ರದಲ್ಲಿ ಹೇಳಲಿದ್ದಾರಂತೆ. ಇದರೊಂದಿಗೆ ಜನಜಾಗೃತಿ ಮೂಡಿಸುವುದು ಇವರ ಉದ್ದೇಶವಂತೆ. ಈ ಚಿತ್ರವನ್ನು ಬಿಡುಗಡೆಗೊಳಿಸಲು ಸ್ವಲ್ಪ ಹಣದ ಮುಗ್ಗಟ್ಟು ಬಂದಾಗ ಇವರಿಗೆ ಬೆನ್ನೆಲು ಬಾಗಿ ಮಹೇಂದ್ರ ಮುನ್ನೋತ್ ನಿಂತಿದ್ದಾರೆ.

ಅವರು ಈ ಚಿತ್ರದಲ್ಲಿ ಪೆÇಲೀಸ್ ಕಮೀಷನರ್ ಪಾತ್ರವನ್ನು ನಿರ್ವಹಿಸಿದ್ದು, ಚಿತ್ರವನ್ನು ಬಿಡುಗಡೆಗೊಳಿಸಲು ಮುಂದಾಗಿದ್ದಾರೆ. ಕಿಲಾಡಿಗಳು ಚಿತ್ರದಲ್ಲಿ ಕೇವಲ ಮೂರು ಹಾಡುಗಳಿದ್ದು, ಇವುಗಳಿಗೆ ಎ.ಟಿ. ರವೀಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಮೂರೂ ಹಾಡುಗಳು ಸಂದರ್ಭಕ್ಕನುಗುಣವಾಗಿ ಮೂಡಿ ಬಂದಿದೆಯಂತೆ. ಒಟ್ಟಿನಲ್ಲಿ ಬಹಳಷ್ಟು ಶ್ರಮ ವಹಿಸಿ ಒಂದು ಸದಭಿರುಚಿಯ ಮಕ್ಕಳ ಚಿತ್ರವನ್ನು ನಿರ್ಮಿಸಿದ್ದು, ಮುಂದಿನ ತಿಂಗಳು ಚಿತ್ರವನ್ನು ತೆರೆಯ ಮೇಲೆ ತರುವ ಆಲೋಚನೆಯನ್ನು ಚಿತ್ರ ತಂಡ ಹೊಂದಿದೆಯಂತೆ.

Facebook Comments

Sri Raghav

Admin