ಅಕ್ರಮ ಆಸ್ತಿ ಪ್ರಕರಣ : ನಿವೃತ್ತ ಅಬಕಾರಿ ಆಯುಕ್ತರಿಗೆ ಎರಡೂವರೆ ವರ್ಷ ಜೈಲು, 90 ಲಕ್ಷ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

Karnataka-lokayukta

ಚಿಕ್ಕಮಗಳೂರು, ಜ.14- ಅಕ್ರಮ ಆಸ್ತಿ ಗಳಿಕೆ ಪ್ರಕರಣದಡಿ ನಿವೃತ್ತ ಅಬಕಾರಿ ಆಯುಕ್ತ ಎಚ್.ಡಿ.ಶ್ರೀನಿವಾಸ್ ಅವರಿಗೆ ನಗರದ ಲೋಕಾಯುಕ್ತ ನ್ಯಾಯಾಲಯ ಎರಡೂವರೆ ವರ್ಷ ಜೈಲು ಶಿಕ್ಷೆ ಹಾಗೂ 90 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ಎಚ್.ಡಿ.ಶ್ರೀನಿವಾಸ್ 1968ರಲ್ಲಿ ಅಬಕಾರಿ ಇನ್‍ಸ್ಪೆಕ್ಟರ್ ಕೆಲಸಕ್ಕೆ ಸೇರಿದ್ದರು. ನಂತರ ಅಬಕಾರಿ ಉಪ ಆಯುಕ್ತರ ಹುದ್ದೇಗರಿ 2002ರಲ್ಲಿ ನಿವೃತ್ತರಾದರು. ಇವರ ಸೇವಾ ಅವಧಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಸಂಬಂಧ ಚಿಕ್ಕಮಗಳೂರಿನ ಅಬಕಾರಿ ಉಪ ಆಯುಕ್ತರಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಇನ್‍ಸ್ಪೆಕ್ಟರ್ ನಾಗೇಶ್ ಐತಾಳ್ ಅವರು ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  ಲೋಕಾಯುಕ್ತ ವಿಶೇಷ ನ್ಯಾಯಾಧೀಶರಾದ ಪ್ರಭಾವತಿ ಎನ್.ಹಿರೇಮಠ್ ಕೂಲಂಕುಷವಾಗಿ ವಾದ-ವಿವಾದವನ್ನು ಆಲಿಸಿ ಸಾಕ್ಷಾಧಾರಗಳ ಮೇರೆಗೆ ಆರೋಪಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ಹಾಗೂ 90 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.   ಲೋಕಾಯುಕ್ತರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಟಿ.ಥಾಮಸ್ ವಾದ ಮಂಡಿಸಿದ್ದರು.

Facebook Comments

Sri Raghav

Admin