ಅಣ್ವಸ್ತ್ರ ಸಮರ ಆರಂಭಿಸುವುದಾಗಿ ಭಾರತಕ್ಕೆ ಪಾಕ್ ಗೊಡ್ಡು ಬೆದರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

India--vs-Pakistan-01
ಇಸ್ಲಾಮಾಬಾದ್/ನವದೆಹಲಿ, ಜ.14-ಭಾರತದ ವಿರುದ್ಧ ಸದಾ ದ್ವೇಷದಿಂದ ಪೂತ್ಕರಿಸುವ ಪಾಕಿಸ್ತಾನ ಅಣ್ವಸ್ತ್ರ ಸಮರ ಆರಂಭಿಸುವುದಾಗಿ ಬೆದರಿಕೆ ಹಾಕಿದೆ. ಪಾಕಿಸ್ತಾನವು ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಬಗ್ಗೆ ಎಚ್ಚರಿಕೆ ನೀಡುತ್ತಿರುವುದು ಉಡಾಫೆ ಹೇಳಿಕೆ ಎಂದು ಭಾರತೀಯ ಭೂ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಟೀಕಿಸಿದ ಬೆನ್ನಲ್ಲೇ ಇಸ್ಲಾಮಾಬಾದ್‍ನಿಂದ ಈ ಧಮ್ಕಿ ಹಾಕಲಾಗಿದೆ. ಭಾರತವು ಒಂದು ದುಷ್ಟ ಮತ್ತು ಕುಟಿಲ ದೇಶ ಎಂದು ಆರೋಪಿಸಿರುವ ಪಾಕಿಸ್ತಾನದ ಸಚಿವರು ಮತ್ತು ಅತ್ಯುನ್ನತ ಸೇನಾಧಿಕಾರಿಗಳು ಅಗತ್ಯ ಎದುರಾದರೆ ಅಣ್ವಸ್ತ್ರ ಯುದ್ಧ ಪ್ರಾರಂಭಿಸುವುದಾಗಿ ಬೆದರಿಕೆವೊಡ್ಡಿದ್ದಾರೆ.

ವಿದೇಶಾಂಗ ಸಚಿವ ಖ್ವಾಜಾ ಮಹಮದ್ ಆಸಿಫ್, ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಡಾ.ಮಹಮದ್ ಫೈಸಲ್ ಅವರು ಅಣ್ವಸ್ತ್ರ ಯುದ್ಧ ಪ್ರಾರಂಭಿಸುವುದಾಗಿ ಪ್ರತ್ಯೇಕ ಹೇಳಿಕೆಗಳಲ್ಲಿ ಬೆದರಿಕೆವೊಡ್ಡಿದ್ದಾರೆ. ಭಾರತವು ನಮ್ಮ ತಾಳ್ಮೆ ಮತ್ತು ಶಕ್ತಿ-ಸಾಮಥ್ರ್ಯ ಪರೀಕ್ಷಿಸಲು ಬಯಸಿದರೆ ಅದಕ್ಕೆ ಯತ್ನಿಸಲಿ. ವೈರಿ ರಾಷ್ಟ್ರದಿಂದ ಎದುರಾಗುವ ಬೆದರಿಕೆಗಳಿಗಾಗಿಯೇ ನಮ್ಮ ಬಳಿ ವಿಶ್ವಾಸಾರ್ಹ ಅಣ್ವಸ್ತ್ರಗಳ ಸಾಮಥ್ರ್ಯವಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಭಾರತೀಯ ಭೂ ಸೇನಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಶುಕ್ರವಾರ ಸುದ್ಧಿಗೋಷ್ಠಿಯಲ್ಲಿ, ಪಾಕಿಸ್ತಾನವು ಅಣ್ವಸ್ತ್ರ ಬೆದರಿಕೆ ಹಾಕುತ್ತಿರುವ ಉಡಾಫೆ ದೇಶ. ಪಾಕಿಸ್ತಾನದೊಂದಿಗೆ ಸಂಘರ್ಷ ಎದುರಾದರೆ ಅದನ್ನು ನಿಭಾಯಿಸಲು ನಾವು ಸಿದ್ಧರಾಗಿದ್ದೇವೆ. ಆ ದೇಶವು ತನ್ನ ಬಳಿ ಅಣ್ವಸ್ತ್ರಗಳಿವೆ ಎಂದು ಉಡಾಫೆ ಹೇಳಿಕೆಗಳನ್ನು ನೀಡಿ ನಮನ್ನು ಬೆದರಿಸಲು ಯತ್ನಿಸುತ್ತಿದೆ. ಆದರೆ ಅದು ಸುಳ್ಳು ಹೇಳುವ ದೇಶ ಎಂದು ಟೀಕಿಸಿದ್ದರು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಾ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಉಗ್ರಗಾಮಿ ಬಣಗಳು ಮತ್ತು ಉಗ್ರರನ್ನು ಸದೆಬಡಿಯುವ ಬದಲು ವಿನಾಕಾರಣ ಭಾರತದ ಮೇಲೆ ವಿಷ ಕಾರುತ್ತಿದೆ.   ಅಮೆರಿಕ ಈಗಾಗಲೇ ಪಾಕಿಸ್ತಾನಕ್ಕೆ ಸೇನಾ ನೆರವು ಸೇರಿದಂತೆ ಇತರ ಸಹಾಯವನ್ನು ರದ್ದುಗೊಳಿಸಿ ದೊಡ್ಡ ಹೊಡೆತ ನೀಡಿದೆ. ಇದರಿಂದ ತಬ್ಬಿಬ್ಬಾಗಿರುವ ಪಾಕ್ ಭಾರತದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಾ ಗೂಬೆ ಕೂರಿಸಲು ಯತ್ನಿಸುತ್ತಿದೆ.

Facebook Comments

Sri Raghav

Admin