ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ದೋಷಾವೃತವಾದ ಮನಸ್ಸುಳ್ಳವರಿಗೆ ಅತಿ ಸುಂದರವಾದುದೂ ವಿಕೃತವಾಗಿ ಕಾಣುತ್ತದೆ. ಚಂದ್ರನಂತೆ ಶುಭ್ರವಾದ ಶಂಖವನ್ನು ಹಳದಿಯೆಂದು ಪಿತ್ತರೋಗಿ ತಿಳಿಯುತ್ತಾನೆ.  -ಕಾವ್ಯಪ್ರಕಾಶ

ಪಂಚಾಂಗ : ಭಾನುವಾರ 14.01.2018

ಸೂರ್ಯಉದಯ ಬೆ.06.46 / ಸೂರ್ಯ ಅಸ್ತ ಸಂ.06.12
ಚಂದ್ರ ಉದಯ ಸಂ.04.06 / ಚಂದ್ರ ಅಸ್ತ ರಾ.04.21
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ, ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ರಾ.02.31)
ನಕ್ಷತ್ರ: ಜ್ಯೇಷ್ಠಾ (ಮ.01.14) / ಯೋಗ: ವೃದ್ಧಿ (ಬೆ.07.03)
ಕರಣ: ಗರಜೆ-ವಣಿಜ್ (ಮ.01.11-ರಾ.02.21)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ, ತೇದಿ: 01

ಇಂದಿನ ವಿಶೇಷ: ಪ್ರದೋಷ, ರವಿ ಮಕರ ರಾಶಿ ಪ್ರವೇಶ ಮ.01.47, ಮಕರ ಸಂಕ್ರಾಂತಿ,  ಉತ್ತರಾಯಣ ಪುಣ್ಯಕಾಲ-ಸಂಕ್ರಮಣ , ಧನುರ್ಮಾಸ ಪೂಜಾ ಸಮಾಪ್ತಿ.

ರಾಶಿ ಭವಿಷ್ಯ :

ಮೇಷ : ಎರಡು-ಮೂರು ವಿಧದಲ್ಲಿ ಸಂಪಾದನೆ ಮಾಡುವಿರಿ, ಪುಣ್ಯ ಕಾರ್ಯಗಳನ್ನು ಮಾಡುವಿರಿ
ವೃಷಭ : ಕಲಾ ಪೋಷಕರಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ, ಶತ್ರುಗಳ ಮೇಲೆ ವಿಜಯ ಸಾಧಿಸುವಿರಿ
ಮಿಥುನ: ತೀರ್ಥಯಾತ್ರೆ ಅಥವಾ ದೂರ ದೇಶ ಪ್ರಯಾಣವನ್ನು ಆಕಸ್ಮಿಕವಾಗಿ ಮಾಡುವ ಯೋಗ
ಕಟಕ : ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ
ಸಿಂಹ: ಬಂಧು-ಮಿತ್ರ ರೊಂದಿಗೆ ಸ್ವಲ್ಪಮಟ್ಟಿನ ವಿರೋಧ ವ್ಯಕ್ತವಾಗುವುದು
ಕನ್ಯಾ: ಉನ್ನತ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ.
ತುಲಾ: ಆಗಾಗ್ಗೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ
ವೃಶ್ಚಿಕ: ಶತ್ರುಗಳ ಕಾಟದಿಂದ ಶುಭ ಕಾರ್ಯಗಳು ನಿಧಾನವಾಗಿ ಆಗಲಿವೆ
ಧನುಸ್ಸು: ಹಿರಿಯರ ವಿರೋಧಕ್ಕೆ ಗುರಿಯಾಗುವಿರಿ
ಮಕರ: ಪುಣ್ಯ ಕಾರ್ಯಗಳನ್ನು ಮಾಡುವಿರಿ
ಕುಂಭ: ಅತ್ತೆ-ಮಾವಂದಿರ ಕೆಲಸ, ಅವರ ಮಕ್ಕಳ ಕೆಲಸಗಳನ್ನು ಮಾಡುವ ಸಂದರ್ಭಗಳು ಬರಲಿವೆ
ಮೀನ: ಕಣ್ಣಿನ ತೊಂದರೆ ಕಂಡುಬರುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin