ಎಸ್‍ಎಫ್‍ಐ ನಾಯಕಿಗೆ ಬೆದರಿಕೆ ಹಾಕಿದ ಆರೋಪಿಗೆ ನ್ಯಾಯಾಂಗ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

SFI--01

ಮಂಗಳೂರು, ಜ.14-ಸಾಮಾಜಿಕ ಜಾಲತಾಣದಲ್ಲಿ ಎಸ್‍ಎಫ್‍ಐ ನಾಯಕಿಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಬಂಧಿತನಾಗಿರುವ ಆರೋಪಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಕ್ಕಿರಿಚೆ ಬಳಿಯ ತೋಟಪಾಡಿ ಗ್ರಾಮದ ಹರೀಶ್ ದೇವಾಡಿಗ (22) ಬಂಧಿತ ಆರೋಪಿ.  ಎಸ್‍ಎಫ್‍ಐ ಸಂಘಟನೆಯ ನಾಯಕಿ ಮಾಧುರಿ ಬೋಳಾರ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕಿರುಕುಳ, ಬೆದರಿಕೆ ಹಾಕಿದ್ದರು ಎಂಬ ಕಾರಣಕ್ಕೆ ಮಂಗಳೂರಿನ ಪಾಂಡೇಶ್ವರ ಪೊಲೀಸರು, ಹರೀಶ್ ದೇವಾಡಿಗನನ್ನು ಬಂಧಿಸಿದ್ದರು.

ಮಾಧುರಿ ಬೋಳಾರ ಮತ್ತು ಇತರರು ಸಂಘಟನೆಯ ಕೆಲಸದ ನಿಮಿತ್ತ ಜತೆಯಾಗಿ ಹೋಗುವಾಗ ತೆಗೆದ ಭಾವಚಿತ್ರವನ್ನು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿದ್ದಲ್ಲದೆ, ಬೆದರಿಕೆ ಸಂದೇಶಗಳನ್ನು ಹಾಕುತ್ತಿದ್ದರು. ಈ ಸಂಬಂಧ ಜ.9 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

fasfAF

Facebook Comments

Sri Raghav

Admin