ಕನ್ನಡ ಸಾಹಿತಿಗೆ ಒಲಿದ ಉತ್ತರಪ್ರದೇಶದ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Uttar
ಬೆಂಗಳೂರು, ಜ.14- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅಧ್ಯಕ್ಷರಾಗಿರುವ ಉತ್ತರಪ್ರದೇಶ ಹಿಂದಿ ಸಂಸ್ಥಾನವು ನೀಡುವ 2016ನೇ ಸಾಲಿನ ಸೌಹಾರ್ದ್ ಸಮ್ಮಾನ್ ಪ್ರಶಸ್ತಿಯನ್ನು ಕನ್ನಡ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಡಾಬಾಬು ಕೃಷ್ಣಮೂರ್ತಿಗೆ ನೀಡಲಾಗಿದೆ. ಎರಡು ಲಕ್ಷ ರೂ.ಗಳ ಮೊತ್ತ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುವ ಈ ಪ್ರತಿಷ್ಠಿತ ಪುರಸ್ಕಾರವನ್ನು 2018ರ ಜನವರಿ 22ರಂದು ಲಕ್ನೋದಲ್ಲಿ ನಡೆಯಲಿರುವ ಸನ್ಮಾನ ಸಮಾರಂಭದಲ್ಲಿ ನೀಡಲಾಗುವುದೆಂದು ಉತ್ತರ ಪ್ರದೇಶ ಹಿಂದೀ ಸಂಸ್ಥಾನದ ಪ್ರಕಟಣೆ ತಿಳಿಸಿದೆ.

ತುಮಕೂರು ವಿವಿಯ ಗೌರವ ಡಾಕ್ಟರೇಟ್, ರಾಜ್ಯ ಸಾಹಿತ್ಯ ಅಕಾಡೆಮಿಯ ಎರಡು ಬಾರಿ ಬಹುಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಮುಂತಾದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರಿಗೆ ಭಾರತದಲ್ಲಿ ಏಕಾತ್ಮತೆಯನ್ನು ಮೂಡಿಸುವಂತಹ ಸಾಹಿತ್ಯ ರಚನೆಯ ಸಲುವಾಗಿ ನೀಡಲಾಗುವ ಸೌಹಾರ್ದ್ ಸಮ್ಮಾನ್ ಪುರಸ್ಕಾರ ಅವರ ಸತತ 45 ವರ್ಷಗಳ ಸಾಹಿತ್ಯ ಕೃಷಿಗಾಗಿ ಉತ್ತರ ಪ್ರದೇಶ ಸರ್ಕಾರ ತೋರಿಸಿರುವ ಗೌರವವಾಗಿದೆ. ಹಿರಿಯ ಸಾಹಿತಿ ಡಾ.ಮೂರ್ತಿಯವರು ಅಜೇಯ, ಅದಮ್ಯ, ಯುಗದ್ರಷ್ಟ ಭಗತ್‍ಸಿಂಗ್, 1857-ಭಾರತದ ಸ್ವಾತಂತ್ರ್ಯ ಸಂಗ್ರಾಮ, ಮಹಾಸಾಧಕ ಮೊದಲಾದ ಬೃಹತ್ ಗ್ರಂಥಗಳನ್ನು ರಚಿಸಿದ್ದು, ಅವು ಉತ್ತಮವಾಗಿ ಮಾರಾಟವಾಗುತ್ತಿರುವ ಪುಸ್ತಕಗಳಾಗಿವೆ.

Facebook Comments

Sri Raghav

Admin