ಕಾಡಾನೆ ಹಾವಳಿಗೆ ಬೇಸತ್ತು ಬಾಳೆ ಬೆಳೆಯನ್ನು ನಾಶ ಮಾಡಿದ ರೈತ

ಈ ಸುದ್ದಿಯನ್ನು ಶೇರ್ ಮಾಡಿ

Bale--01
ಮೈಸೂರು, ಜ.14-ಕಾಡಾನೆ ದಾಳಿಯಿಂದ ಬೇಸತ್ತ ರೈತನೊಬ್ಬ ಟ್ರ್ಯಾಕ್ಟರ್ ಮೂಲಕ ಬಾಳೆ ಬೆಳೆಯನ್ನು ನಾಶಪಡಿಸಿರುವ ಘಟನೆ ನಾಗಾಣಪುರದಲ್ಲಿ ನಡೆದಿದೆ. ಸತತ ಕಾಡಾನೆ ದಾಳಿ ಮಾಡುತ್ತಿದ್ದರೂ ಅರಣ್ಯ ಅಧಿಕಾರಿಗಳು ನೆರವಿಗೆ ಬರಲಿಲ್ಲ ಎಂದು ಅಸಮಾಧಾನಗೊಂಡ ನಾಗರಾಜ್ ಎಂಬ ರೈತ ಇಡೀ ಬಾಳೆ ಬೆಳೆಯನ್ನು ತಾವೇ ನಾಶಪಡಿಸಿದ್ದಾರೆ.

ನಾಲ್ಕು ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯುತ್ತಿದ್ದು, ಕಾಡಾನೆಗಳು ನಿರಂತರವಾಗಿ ದಾಳಿ ಮಾಡಿ ಬೆಳೆಯನ್ನು ಹಾಳು ಮಾಡುತ್ತಿದ್ದವು. ಇದುವರೆಗೂ ನಾಲ್ಕು ಬಾರಿ ಕಾಡಾನೆಗಳು ದಾಳಿ ಮಾಡಿದ್ದರಿಂದ ಬೆಳೆ ನಾಶವಾಗಿತ್ತು.  ಈ ಬಗ್ಗೆ ಸ್ಥಳೀಯ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕಾಡಾನೆ ದಾಳಿಯಿಂದ ಬೆಳೆ ರಕ್ಷಿಸುವ ಕ್ರಮ ಕೈಗೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin