ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

kolar

ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಚೇರಿಯಲ್ಲಿ ಶೀಘ್ರಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ, ಆದೇಶ ಜಾರಿಕಾರ ಹಾಗೂ ಸೇವಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 41
ಹುದ್ದೆಗಳ ವಿವರ
1.ಶೀಘ್ರಲಿಪಿಗಾರ – 13
2.ಬೆರಳಚ್ಚುಗಾರ – 13
3.ಬೆರಳಚ್ಚು ನಕಲುಗಾರ – 05
4.ಆದೇಶ ಜಾರಿಕಾರ – 04
5.ಸೇವಕರ – 06

ವಿದ್ಯಾರ್ಹತೆ : ಕ್ರ.ಸಂ 1,2,3ರ ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು. ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿಉತ್ತೀರ್ಣರಾಗಿರಬೇಕು. ಕ್ರ.ಸಂ 4ರ ಹುದ್ದೆಗೆ ಎಸ್.ಎಸ್.ಎಲ್.ಸಿ ಅಥವಾ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು. ಕ್ರ.ಸಂ 5ರ ಹುದ್ದೆಗೆ ಏಳನೇ ತರಗತಿ ಉತ್ತೀರ್ಣರಾಗಿರಬೇಕು.

ವಯೋಮಿತಿ : ಕನಿಷ್ಠ 18 ವರ್ಷ ನಿಗದಿಮಾಡಲಾಗಿದ್ದು, ಗರಿಷ್ಠ ವಯಸನ್ನು ಸಾಮಾನ್ಯ ವರ್ಗದವರಿಗೆ 35 ವರ್ಷ, ಇತರ ಹಿಂದುಳಿದ 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ, ಪ.ಜಾ, ಪ.ಪಂ, ಪ್ರವರ್ಗ – 1 ರ ವರ್ಗಕ್ಕೆ 40 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಸರ್ಕಾರಿ ಸೇವೆಯಲ್ಲಿ ಇರುವವರಿಗೆ, ವಿಧವೆಯರಿಗೆ, ಮಾಜಿಸೈನಿಕರಿಗೆ, ಅಂಗವಿಕಲರಿಗೆ ನಿಯಮಾನುಸಾರ ಸಡಿಲಿಕೆ ಮಾಡಲಾಗಿದೆ.

ಶುಲ್ಕ : ಸಾಮಾನ್ಯ, 2ಎ, 2ಬಿ, 3ಎ, 3ಬಿ ವರ್ಗದವರಿಗೆ 200 ರೂ, ಪ.ಜಾ, ಪ.ಪಂ, ಪ್ರವರ್ಗ – 1 ಮತ್ತು ಅಂಗವಿಕಲರಿಗೆ 100 ರೂ ಶುಲ್ಕ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕಡೆಯ ದಿನಾಂಕ : 09-02-2018
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  www.karnatakajudiciary.kar.nic.in  ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

Facebook Comments