ಚಿತ್ರಸಂತೆಯಲ್ಲಿ ‘ಕೃಷ್ಣ ತುಳಸಿ’ಯ ಟೀಸರ್ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

krishna-tulasi

ಚಿತ್ರಕಲಾ ಪರಿಷತ್ತಿನ ಆಸು ಪಾಸಲ್ಲೆಲ್ಲ ಚಿತ್ರಸಂತೆಯ ಸಂಭ್ರಮ, ಜನಸಾಗರ ನೆರೆದಿದೆ. ಕೃಷ್ಣ ತುಳಸಿ ಚಿತ್ರತಂಡ ಆ ಜನಸಾಗರದ ನಡುವೆಯೇ ಟೀಸರ್ ಬಿಡುಗಡೆ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದೆ.

ಸಂಚಾರಿ ವಿಜಯ್ ಮತ್ತು ಮೇಘಶ್ರೀ ಮುಖ್ಯಭೂಮಿಕೆಯಲ್ಲಿರೋ ಕೃಷ್ಣ ತುಳಸಿ ಚಿತ್ರವನ್ನು ಸುಖೇಶ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್, ಜಯಂತ್‍ಕಾಯ್ಕಣಿ, ಹೃದಯಶಿವ ರಚಿಸಿರುವ ನಾಲ್ಕು ಹಾಡುಗಳಿಗೆ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿರಿಯ ಛಾಯಗ್ರಾಹಕ ಮಾಪಾಕ್ಷಿ ಬಳಿ ಕೆಲಸ ಮಾಡಿರುವ ನವೀನ್.ಎಸ್.ಅಕ್ಷಿ ಚಿತ್ರಕ್ಕೆ ಕ್ಯಾಮೆರಾ ಕಣ್ಣಾಗಿದ್ದಾರೆ. ದೇವನಹಳ್ಳಿಯಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿರುವ ಎಂ.ನಾರಾಯಣಸ್ವಾಮಿ ಪ್ರಥಮ ಅನುಭವ ಎನ್ನುವಂತೆ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಪರಿಚಯವಾಗುತ್ತಿದ್ದಾರೆ. ವಿಭಿನ್ನವಾಗಿ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದೆ.

Facebook Comments

Sri Raghav

Admin