ನಂಜನಗೂಡಲ್ಲಿ 22ಕ್ಕೆ ಬಿಜೆಪಿಯ ಬೃಹತ್ ಪರಿವರ್ತನಾ ಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

nanjana-gudu-bjp

ನಂಜನಗೂಡು, ಜ.14- ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿಯ ಪರಿವರ್ತನಾ ಯಾತ್ರೆಯು ಜ.22 ರಂದು ಸೋಮವಾರ ಮದ್ಯಾಹ್ನ 3 ಗಂಟೆಗೆ ನಂಜನಗೂಡಿಗೆ ಆಗಮಿಸಲಿದ್ದು ವಿದ್ಯಾವರ್ಧಕ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಕೋಟೆ ಎಂ ಶಿವಣ್ಣ ತಿಳಿಸಿದ್ದಾರೆ. ಬಿಜೆಪಿಯ ಪರಿವರ್ತನಾ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ಪರಿವರ್ತನಾ ಯಾತ್ರೆ ಮುಂಬರುವ ವಿಧಾನಸಭಾ ಚುನಾವಣೆಯ ಹೆಬ್ಬಾಗಿಲಾಗಿದ್ದು ಕಾರ್ಯಕರ್ತರನ್ನು ಸಂಘಟಿಸುವ ದೃಷ್ಠಿಯಿಂದ ಬಹಳ ಮಹತ್ವದ ಕಾರ್ಯಕ್ರಮವೆನಿಸಿದೆ. ಕ್ಷೇತ್ರಾದ್ಯಂತ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದು ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಸಂಬಂಧ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮತ್ತು ವರಿಷ್ಟರು ಕರ್ನಾಟಕದಲ್ಲಿ ಬಿಜೆಪಿ ಆಡಳಿತಕ್ಕೆ ತರಲು ಎಲ್ಲಾ ರೀತಿಯ ವ್ಯವಸ್ಥೆಗಳನ್ನು ರೂಪಿಸಿದ್ದಾರೆಂದರು. 22ರ ಪರಿವರ್ತನಾ ಯಾತ್ರೆಯ ಕಾರ್ಯಕ್ರಮಕ್ಕೆ ಸಮಿತಿಗಳನ್ನು ರಚನೆ ಮಾಡಿ ಭೂತ್ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿ ಸಮಾರಂಭಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದರು.

ಬಿಜೆಪಿ ಉಪಾಧ್ಯಕ್ಷರಾದ ಎಸ್.ಮಹದೇವಯ್ಯ, ಎಸ್.ಸಿ ಅಶೋಕ್, ಹರ್ಷವರ್ಧನ್, ಪರಿವರ್ತನಾ ರ್ಯಾಲಿಯ ಉಸ್ತುವಾರಿ ಹೇಮಂತ್‍ಕುಮಾರ್ ಕುಂಬ್ರಳ್ಳಿ ಸುಬ್ಬಣ್ಣ ಕಾರ್ಯದರ್ಶಿ ಬೋರೇಗೌಡ, ಎನ್ ಆರ್ ಕೃಷ್ಣಪ್ಪಗೌಡ ಮುಂತಾದವರು ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಮಾತನಾಡಿದರು.  ತಾಲ್ಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾದ್ಯಕ್ಷ ಬಾಲರಾಜು, ಜಿ.ಪಂ ಸದಸ್ಯೆ ಮಂಗಳಾ ಸೋಮಶೇಖರ್, ನಗರಸಭಾ ಉಪಾಧ್ಯಕ್ಷ ಪ್ರದೀಪ್, ಸದಸ್ಯರಾದ ಆನಂದ್, ಗಿರೀಶ್, ಮಹದೇವಸ್ವಾಮಿ, ಮಂಗಳ, ತಾ.ಪಂ ಸದಸ್ಯರಾದ ಬಸವರಾಜು ಭಾಗವಹಿಸಿದ್ದರು.

Facebook Comments

Sri Raghav

Admin