ಪತ್ರಿಕೋದ್ಯಮ ಪ್ರಾಧ್ಯಾಪಕ ಕಾರು ಅಪಘಾತದಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

journalist-dead

ಬೆಳಗಾವಿ, ಜ.14- ಗೋವಾಕ್ಕೆ ಪ್ರವಾಸಕ್ಕೆ ತೆರಳಿ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಬರುತ್ತಿದ್ದಾಗ ಅಪಘಾತಕ್ಕೀಡಾಗಿ ಪತ್ರಿಕೋದ್ಯಮ ಪ್ರಾಧ್ಯಾಪಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಂದಗಡ ಬಳಿ ನಡೆದಿದೆ. ಬಾಗಲಕೋಟೆಯ ನಿವಾಸಿ ಬಿ.ವಿ.ವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿರುವ ಡಾ.ವೀರೇಶ್ ಹಿರೇಮಠ ಮೃತ ದುರ್ದೈವಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಪತ್ನಿ, ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳಿದ್ದರು. ಇಂದು ಮುಂಜಾನೆ ಬಾಗಲಕೋಟೆಗೆ ವಾಪಸಾಗುವಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದೆ.  ತೀವ್ರವಾಗಿ ಗಾಯಗೊಂಡ ಡಾ.ವೀರೇಶ್ ಅಲ್ಲೇ ಕೊನೆಯುಸಿರೆಳೆದರೆ ಪತ್ನಿ ಹಾಗೂ ಮಕ್ಕಳು ಹಾಗೂ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು , ಅವರನ್ನು ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Facebook Comments

Sri Raghav

Admin