ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Fire-Ca-r

ಕಲ್ಬುರ್ಗಿ, ಜ.14- ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿರುವ ಘಟನೆ ನಗರದ ವಿವಿಧೆಡೆ ನಡೆದಿದೆ.  ಬನಶಂಕರಿ ಕಾಲೋನಿ ಜಯನಗರ, ವಿಶ್ವೇಶ್ವರಯ್ಯ ಕಾಲೋನಿ, ಲಾಲಾಗೇರಿ ಕ್ರಾಸ್ ಸೇರಿದಂತೆ ವಿವಿಧೆಡೆ ರಸ್ತೆ ಬದಿ ನಿಂತಿದ್ದ ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಹೋಗಿದ್ದರು. ಏಕ ಸಮಯದಲ್ಲೇ ಎಲ್ಲೆಡೆ ಬೆಂಕಿ ಬಿದ್ದಿರುವುದರಿಂದ ವ್ಯವಸ್ಥಿತ ಸಂಚು ರೂಪಿಸಿ ಈ ಕೃತ್ಯ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಬ್ಬದ ಸಡಗರದಲ್ಲಿ ಜನರು ಇದ್ದಾಗ ಅವರನ್ನು ಆತಂಕಕ್ಕೆ ದೂಡುವ ದುಸ್ಸಾಹಸ ಇದಾಗಿದೆ ಎಂದು ಹೇಳಲಾಗುತ್ತಿದ್ದು , ಸ್ಥಳಕ್ಕೆ ಎಸ್.ಪಿ.ಶಶಿಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin