ಮಹದಾಯಿ ವಿವಾದದಲ್ಲಿ ಗೊಂದಲ ಸೃಷ್ಟಿಸುತ್ತಿರುವ ಸಿಎಂ : ಬಿಎಸ್‍ವೈ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--Siddaramaiah--
ದಾವಣಗೆರೆ, ಜ.14-ಮಹದಾಯಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು. ಹೊನ್ನಾಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋವಾ ಕಾಂಗ್ರೆಸ್ಸಿಗರು ಕರ್ನಾಟಕಕ್ಕೆ ಒಂದು ಹನಿ ನೀರು ಕೊಡುವುದಿಲ್ಲ ಎಂದಿದ್ದರು. ಹೊಸ ವರ್ಷಾಚರಣೆಗೆ ಗೋವಾಕ್ಕೆಹೋಗಿದ್ದ ಸೋನಿಯಾಗಾಂಧಿ-ರಾಹುಲ್‍ಗಾಂಧಿಯವರು ಅವರುಗಳಿಗೆ ಬುದ್ಧಿ ಹೇಳಿ ಬರಬೇಕಿತ್ತು. ಆ ಕೆಲಸ ಮಾಡದೆ ವಿನಾಕಾರಣ ಆರೋಪಿಸುತ್ತಿದ್ದಾರೆ ಎಂದು ದೂರಿದರು. ರಾಜ್ಯದ ಜನರಿಗೆ ಭರವಸೆ ಕೊಡುತ್ತೇವೆ ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರನ್ನು ಒಪ್ಪಿಸಿ ರಾಜ್ಯಕ್ಕೆ ಮಹದಾಯಿ ನೀರನ್ನು ತಂದೇ ತರುತ್ತೇನೆಂದು ಭರವಸೆ ನೀಡಿದ ಬಿಎಸ್‍ವೈ, ಮಹದಾಯಿ ಕಾಂಗ್ರೆಸ್‍ನ ಪಾಪದ ಕೂಸು ಎಂದು ಹರಿಹಾಯ್ದರು.

Facebook Comments

Sri Raghav

Admin