ಮೈಸೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arrested
ಮೈಸೂರು, ಜ.14- ವೀಸಾದ ಅವಧಿ ಮುಗಿದಿದ್ದರೂ ಅನಧಿಕೃತವಾಗಿ ನಗರದಲ್ಲೇ ನೆಲೆಸಿದ್ದ ವಿದೇಶಿ ಪ್ರಜೆಯೊಬ್ಬನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ತಾಂಜೇನಿಯಾದ ಐಡನ್ ಎಮಿಲಿಯನ್ ರೀವಾ ಬಂಧಿತ ವಿದೇಶಿ ಪ್ರಜೆ. ಈತ ವಿದ್ಯಾರ್ಥಿ ವೀಸಾದಲ್ಲಿ 2014ರಲ್ಲಿ ಭಾರತಕ್ಕೆ ಆಗಮಿಸಿದ್ದು, ವೀಸಾ ಅವಧಿ ಮುಗಿದಿದ್ದರೂ ವಿಜಯನಗರದ ವಿನಾಯಕ ಬಡಾವಣೆ 2ನೇ ಹಂತದ ಮನೆಯಲ್ಲಿ ವಾಸವಿದ್ದನು.  ಈ ಬಗ್ಗೆ ಸಿಟಿ ಸ್ಪೆಷಲ್ ಬ್ರಾಂಚ್‍ನಿಂದ ಮಾಹಿತಿ ಪಡೆದ ನಗರ ಪೊಲೀಸ್ ಆಯುಕ್ತರು ವಿಜಯನಗರ ಪೊಲೀಸರಿಗೆ ನಿರ್ದೇಶನ ನೀಡಿದ ಮೇರೆಗೆ ಈತನನ್ನು ಬಂಧಿಸಿದ್ದಾರೆ.

ನಗರದ ಮನೆಗಳು, ಅಪಾರ್ಟ್‍ಮೆಂಟ್, ಬೋರ್ಡಿಂಗ್, ಹೋಮ್ ಸ್ಟೇ, ಪೇಯಿಂಗ್ ಗೆಸ್ಟ್ (ಪಿಜಿ) ಮಾಲೀಕರು ವಿದೇಶಿಗರಿಗೆ ಬಾಡಿಗೆ ನೀಡುವ ಮೊದಲು ವೀಸಾ ಮಾನ್ಯತೆಯನ್ನು ಪರಿಶೀಲಿಸಿ ಅವರ ಬಗ್ಗೆ ಪೊಲೀಸರಿಗೆ 20 ಗಂಟೆಯೊಳಗೆ ಮಾಹಿತಿ ನೀಡಬೇಕೆಂದು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣೇಶ್ವರ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin