ಯಾವುದೇ ಸಂಘಟನೆಗಳ ನಿರ್ಬಂಧಕ್ಕೆ ಸರ್ಕಾರ ಆಲೋಚಿಸಿಲ್ಲ : ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Ramalingareddy--02
ಶಿವಮೊಗ್ಗ,ಜ.14- ಯಾವುದೇ ಸಂಘಟನೆಗೆಳ ನಿರ್ಬಂಧಕ್ಕೆ ಸರ್ಕಾರ ಆಲೋಚಿಸಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಹೊಸನಗರ ತಾಲೂಕಿನ ರಿಬ್ಬನ್‍ಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘಟನೆಗಳ ನಿಷೇಧವನ್ನು ಕೇಂದ್ರ ಸರ್ಕಾರ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಕೇವಲ ಶಿಫಾರಸು ಮಾಡುವ ಅಧಿಕಾರವಿದೆ. ಸಂಘಟನೆಗಳನ್ನು ನಿರ್ಬಂಧಿಸುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದ ಅವರು, ಸದ್ಯಕ್ಕೆ ಶಿಫಾರಸು ಮಾಡುವ ವಿಚಾರ ರಾಜ್ಯ ಸರ್ಕಾರದ ಮುಂದಿಲ್ಲ ಎಂದರು.

ಕರಾವಳಿಯಲ್ಲಿ ಮಾತ್ರ ಕೋಮು ಸಾಮರಸ್ಯ ಹಾಳು ಮಾಡುವಂತಹ ಘಟನೆಗಳು, ಹತ್ಯೆಗಳು ನಡೆಯುತ್ತಿವೆ. ಇದು ಕೇವಲ ಒಂದು ಸಂಘಟನೆಯಿಂದ ನಡೆಯುತ್ತಿಲ್ಲ. ಪಿಎಫ್‍ಐ, ಆರ್‍ಎಸ್‍ಎಸ್, ಎಸ್‍ಡಿಪಿಐ, ಶ್ರೀರಾಮಸೇನೆ, ಬಜರಂಗದಳ ಸಂಘಟನೆಗಳು ಗಲಾಟೆಯಲ್ಲಿ ಭಾಗಿಯಾಗಿವೆ. ನಿರ್ಬಂಧಿಸುವುದಾದರೆ ಎಲ್ಲಾ ಸಂಘಟನೆಗಳನ್ನು ನಿರ್ಬಂಧಿಸಬೇಕಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಇಂತಹ ಸಂಘಟನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಈ ರೀತಿ ಆಗಬಾರದು ಎಂದರು.

Facebook Comments

Sri Raghav

Admin