ರಮ್ಯಾ ಅವರಿಗೆ ಸೋಶಿಯಲ್ ಮೀಡಿಯಾ ಎಲ್ಲಿದೆ ಅಂತಾನೆ ಗೊತ್ತಿಲ್ವಂತೆ..!

ಈ ಸುದ್ದಿಯನ್ನು ಶೇರ್ ಮಾಡಿ

ramya

ಬೆಂಗಳೂರು, ಜ.14-ಮಾಜಿ ಸಂಸದೆ, ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರಿಗೆ ರಾಜ್ಯದಲ್ಲಿರುವ ಸೋಶಿಯಲ್ ಮೀಡಿಯಾದ ಕಚೇರಿಯೇ ಗೊತ್ತಿರಲಿಲ್ಲವಂತೆ. ಅಂಥದೊಂದು ವಿಷಯ ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿದೆ. ನಿನ್ನೆ ಧಿಡೀರನೇ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ ಅವರು, ಕಚೇರಿಯ ಮೂರು ಮಹಡಿಗಳನ್ನು ಹತ್ತಿ ಇಳಿದಿದ್ದಾರೆ. ಸದಸ್ಯರ ನೋಂದಣಾ ಕಚೇರಿಗೆ ಹೋಗಿದ್ದಾರೆ. ಆದರೆ ಅವರು ಹೋಗಬೇಕಾದದ್ದು ಕಾಂಗ್ರೆಸ್ ಸೋಶಿಯಲ್ ಮೀಡಿಯ ನಿರ್ವಹಿಸುತ್ತಿರುವ ಕನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ಕಚೇರಿಗೆ. ಆದರೆ ಅದು ಎಲ್ಲಿದೆ ಎಂಬುದೇ ಅವರಿಗೆ ಗೊತ್ತಿರಲಿಲ್ಲವಂತೆ. ಹಾಗಾಗಿ ಅವರು ಕೆಪಿಸಿಸಿ ಕಚೇರಿಗೆ ಭೇಟಿ ಕೊಟ್ಟು ಹರಿಬಿರಿಯಲ್ಲಿ ಹಿಂದಿರುಗಿದ್ದಾರೆ.

ರಮ್ಯಾ ಅವರು ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೈಕಮಾಂಡ್ ವಲಯದಲ್ಲಿ ಪವರ್‍ಫುಲ್ ನಾಯಕಿಯಾಗಿ ಬೆಳೆದಿದ್ದಾರೆ. ಅಂಥವರು ಕೆಪಿಸಿಸಿ ಕಚೇರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮೊದಲೇ ಮಾಹಿತಿ ನೀಡಬಹುದಿತ್ತು. ಆದರೆ ಅದ್ಯಾವುದನ್ನೂ ನೀಡದೆ ದಿಢೀರನೆ ಆಗಮಿಸಿದ್ದಾರೆ.

ಆದರೆ ತಾವು ನಿರ್ವಹಿಸುತ್ತಿರುವ ಜವಾಬ್ದಾರಿಯ ಕಚೇರಿ ಮತ್ತು ಅಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಅವರು ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಕಾರಣ ಅವರಿಗೆ ಆ ಕಚೇರಿ ಎಲ್ಲಿದೆ ಎಂಬುದೇ ಗೊತ್ತಿರಲಿಲ್ಲ. ಹೀಗೆ ಬಂದು ಆಗೇ ಹೋದರು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ರಾಹುಲ್ ಗಾಂಧಿಯವರು ಪರಿಣಾಮಕಾರಿಯಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ ಸೋಶಿಯಲ್ ಮೀಡಿಯ ಮುಖ್ಯಸ್ಥರಿಗೇ ತಮ್ಮ ಕಚೇರಿ ಎಲ್ಲಿದೆ ಎಂಬುದು ಗೊತ್ತಿಲ್ಲವಾದರೆ ಅದರ ನಿರ್ವಹಣೆ ಹೇಗೆ? ಮುಂಬರುವ ಚುನಾವಣೆ ಯಾವ ರೀತಿ ಎದುರಿಸುತ್ತಾರೆ. ಇಲ್ಲಿ ಮುಖ್ಯಸ್ಥರಿಗೆ ಕಚೇರಿಯ ಅರಿವೇ ಇಲ್ಲ ಎಂಬುದು ವಿಪರ್ಯಾಸದ ಸಂಗತಿ ಎಂದು ಹಲವು ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದದ್ದು ಕೇಳಿಬಂದಿತು.

Facebook Comments

Sri Raghav

Admin