ರಾಷ್ಟೀಯ ಸಂಸ್ಕೃತಿ ಮಹೋತ್ಸವಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar

ಬೆಂಗಳೂರು, ಜ.15- ದೇಶದಲ್ಲಿನ 3686 ಪುರಾತತ್ವ ಸ್ಮಾರಕಗಳಲ್ಲಿ 506 ಸ್ಮಾರಕಗಳು ಕರ್ನಾಟಕದಲ್ಲೇ ಇರುವುದು ವಿಶೇಷ ಎಂದು ಕೇಂದ್ರ ಸಂಸ್ಕøತಿ ಸಚಿವಾಲಯದ ರಾಜ್ಯ ಸಚಿವ ಡಾ.ಮಹೇಶ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಕೇಂದ್ರ ಸಂಸ್ಕøತಿ ಸಚಿವಾಲಯ ಏಕ್ ಭಾರತ್ ಶ್ರೇಷ್ಠ ಭಾರತದ ಪರಿಕಲ್ಪನೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸಂಸ್ಕøತಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.  ಕರ್ನಾಟಕ ಮತ್ತು ಉತ್ತರಖಂಡ ರಾಜ್ಯಗಳ ಕಲೆ ಮತ್ತು ಸಂಸ್ಕøತಿ ಬಿಂಬಿಸುವಂತಹ ಮಹೋತ್ಸವ ಇದಾಗಿದ್ದು, ಇದೇ 20ರ ವರೆಗೂ ನಡೆಯಲಿದೆ ಎಂದರು.

ಈ ಏಳು ದಿನಗಳ ಮಹೋತ್ಸವದಲ್ಲಿ ಶಾಸ್ತ್ರೀಯ, ಜಾನಪದ, ಸಂಗೀತ, ನೃತ್ಯ, ರಂಗಭೂಮಿ, ನಾಟಕ, ದೃಶ್ಯಕಲೆ ಸೇರಿದಂತೆ ಇನ್ನೂ ಹಲವಾರು ಕಲೆ ಮತ್ತು ಸಂಸ್ಕøತಿಯ ಕಾರ್ಯಕ್ರಮಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ.  ದೇಶದ ಪ್ರತಿ ನೂರು ಮೀಟರ್ ವ್ಯಾಪ್ತಿಯಲ್ಲಿ ಭಾಷೆ, ಸಂಸ್ಕøತಿ ಹಾಗೂ ಸಂವೇದನೆ ಬದಲಾಗುತ್ತದೆ. ಆದರೂ ನಾವೆಲ್ಲರೂ ಭಾರತೀಯರೇ. ಕರ್ನಾಟಕದಲ್ಲಿ ಮೈಸೂರು, ಪಟ್ಟದಕಲ್ಲು, ಹಂಪಿ, ಐಹೊಳೆ, ಬೀದರ್, ಚಿತ್ರದುರ್ಗದ ಕೋಟೆ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿವೆ. ಇವು ಇಲ್ಲಿನ ಕಲೆ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ ಎಂದರು.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರಗಳು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಮಾತನಾಡಿ, ಕರ್ನಾಟಕ ಭಾರತೀಯ ಕಲೆ, ಸಂಸ್ಕøತಿ, ಸಾಹಿತ್ಯಕ್ಕೆ ಮುಕುಟಪ್ರಾಯವಾಗಿದೆ. ಸಾಹಿತ್ಯ, ಸಂಸ್ಕøತಿ, ಕಲೆ ಹಾಗೂ ಸಿನಿಮಾ ಕೇವಲ ಮನೋರಂಜನೆಯಲ್ಲ. ಸಂಸ್ಕøತಿಯ ಭಾಗ ಎಂದು ಪ್ರತಿಪಾದಿಸಿದರು.
ರಾಮನ್ ರಿಚ್ಯುವಲ್ ಥಿಯೇಟರ್ ಆಫ್ ಗರ್ವಾಲ್ ಹಿಮಾಲಯಾಸ್ ನೃತ್ಯ ಪ್ರದರ್ಶನ ಮತ್ತು ತಿರುವತೀರ್(ಕೇರಳ), ಕಾಕ್ಸರ್ ನೃತ್ಯ (ಛತ್ತೀಸ್‍ಘಡ), ಕಾಲ್‍ಬೇಲಿಯಾ (ರಾಜಸ್ಥಾನ್), ಪುರುಲಿಯಾ ಚೌ(ಪಶ್ಚಿಮ ಬಂಗಾಳ), ಗುಡುಂ ಬಾಜ(ಮಧ್ಯಪ್ರದೇಶ) ತಂಡಗಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.  ಬೆಂಗಳೂರಿನಲ್ಲಿ ನಾಳೆವರೆಗೆ ನಡೆಯಲಿರುವ ಈ ಮಹೋತ್ಸವ ಒಂದು ವಾರ ಕಾಲ ರಾಜ್ಯದ ವಿವಿಧ ನಗರಗಳಲ್ಲಿ ನಡೆಯಲಿದೆ. ಹುಬ್ಬಳ್ಳಿ…-ಧಾರವಾಡದ ನೆಹರೂ ಸ್ಟೇಡಿಯಂನಲ್ಲಿ ಜ.17-18, ಮಂಗಳೂರಿನ ನೆಹರೂ ಮೈದಾನದಲ್ಲಿ ಜ.19-20ರಂದು ನಡೆಯಲಿದೆ.

Facebook Comments

Sri Raghav

Admin