ರೈತರಿಗೆ ಲಾಭವಾಗದೆ ಹೊರತು ಜಿಡಿಪಿ ಪ್ರಗತಿ ಅಸಮರ್ಥನೀಯ : ಜೇಟ್ಲಿ

ಈ ಸುದ್ದಿಯನ್ನು ಶೇರ್ ಮಾಡಿ

Arun-Jetly
ನವದೆಹಲಿ, ಜ.14-ಕೃಷಿ ವಲಯ ಕೇಂದ್ರ ಸರ್ಕಾರದ ಪ್ರಥಮಾದ್ಯತೆ ಎಂದು ಪುನರುಚ್ಚರಿಸಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ರೈತರಿಗೆ ಪ್ರಯೋಜನ ಮತ್ತು ಲಾಭವಾಗದ ಹೊರತು ಜಿಡಿಪಿ (ದೇಶೀಯ ಒಟ್ಟು ಉತ್ಪನ್ನ) ಪ್ರಗತಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಗರಿಷ್ಠ ಆದ್ಯತೆ ನೀಡುತ್ತಿದೆ. ಇದರಿಂದಾಗಿ ಕೃಷಿ ವಲಯದಲ್ಲಿ ಬೆಳವಣಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.

ಫೆಬ್ರವರಿ ಮೊದಲ ವಾರ ಮಂಡನೆಯಾಗಲಿರುವ ಬಜೆಟ್ ಕೃಷಿಕರಿಗೆ ಮತ್ತು ಮಾಧ್ಯಮ ವರ್ಗದವರಿಗೆ ಪೂರಕವಾಗಿರುತ್ತದೆ ಎಂಬ ಮುನ್ಸೂಚನೆಯನ್ನು ನೀಡಿದ ಅವರು ರೈತರು, ಬಡವರು ಮತ್ತು ಆರ್ಥಿಕ ದುರ್ಬಲರ ಏಳಿಗೆಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದು ಮುಂದುವರಿಯುತ್ತದೆ ಎಂದು ತಿಳಿಸಿದರು.

Facebook Comments

Sri Raghav

Admin