ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Makara-jyothi--002

ಶಬರಿಮಲೆ. ಜ.14 : ಸಂಕ್ರಮಣ ದಿನವಾದ ಇಂದು ಪ್ರತಿ ವರ್ಷದಂತೆ ಈ ಬಾರಿಯೂ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನ ಪಡೆದ ಅಯ್ಯಪ್ಪ ಸ್ವಾಮಿ ಭಕ್ತರು ಪುನೀತರಾದರು.   ಶಬರಿಮಲೆಯ ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿಯ ರೂಪದಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಭಕ್ತರು ಪುನೀತರಾದರು.
ಯಾವುದೇ ಬೇದಭಾವವಿಲ್ಲದೆ ಕಡು ಬಡವರಿಂದ ಶ್ರೀಮಂತರವರೆಗೂ ಪ್ರತಿ ವರ್ಷವೂ ಶಬರಿಮಲೆಗೆ ಭಕ್ತಾದಿಗಳಾಗಿ ಆಗಮಿಸಿ ಅಯ್ಯಪ್ಪ ಸ್ವಾಮಿ ಹಾಗೂ ಜ್ಯೋತಿಯ ದರ್ಶನ ಪಡೆದು ಪುನೀತರಾಗುವರು.

ಲಕ್ಷಾಂತರ ಭಕ್ತರು ಮಕರ ಜ್ಯೋತಿಯಂದು ಶಬರಿಮಲೆಗೆ ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಬಂದೋಬಸ್ತ್ ಹಾಗೂ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

Facebook Comments

Sri Raghav

Admin