ಶ್ರೀಕಂಠೇಶ್ವರ ದೇವಾಲಯದಲ್ಲಿ 14 ಲಕ್ಷಕ್ಕೂ ಹೆಚ್ಚು ಹಣ ಗುಳುಂ ಮಾಡಿದ್ದ ಸಿಬ್ಬಂದಿಗೆ ನೋಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

Nanjanagud--0007

ನಂಜನಗೂಡು, ಜ.14-ಶ್ರೀಕಂಠೇಶ್ವರ ದೇವಾಲಯದಲ್ಲಿ 14 ಲಕ್ಷಕ್ಕೂ ಹೆಚ್ಚು ಹಣ ಗುಳುಂ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ದೇಗುಲದ ಮೂವರು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹರಕೆ ತೀರಿಸಲು ಬರುವ ಭಕ್ತರಿಗೆ ತುಲಾಭಾರ ಸೇರಿದಂತೆ ಇನ್ನು ಕೆಲವು ಸೇವೆಗಳಿಗೆ ವಿಧಿಸುವ ಶುಲ್ಕಕ್ಕೆ ನಕಲು ರಶೀದಿ ನೀಡಿ ಮತ್ತೆ ಕೆಲವರಿಗೆ ರಶೀದಿ ನೀಡದೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಅವ್ಯವಹಾರ ನಡೆಸಿದೆ. ಈ ಸಂಬಂಧ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಮಾಹಿತಿ ನೀಡಿದ್ದು, ದೇವಾಲಯದಲ್ಲಿ ರಶೀದಿ ಬರೆಯುವ ಕೆಲಸ ನಿರ್ವಹಿಸುತ್ತಿರುವ ಅಭಿಷೇಕ್, ಸುಭಾಷಿಣಿ ಹಾಗೂ ಇಲ್ಲಿನ ನಿವೃತ್ತ ಕೆಲಸಗಾರ ಶ್ರೀಕಂಠೇಸ್ವಾಮಿ ಎಂಬುವರೇ ನೋಟಿಸ್ ನೀಡಿರುವುದಾಗಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಅಂದರೆ 2016-17ನೇ ಸಾಲಿನಲ್ಲಿ ಈ ವಂಚನೆ ಹಣ ದುರುಪಯೋಗ ನಡೆದಿದ್ದು, ಭಕ್ತಾದಿಯೊಬ್ಬರು ತಮಗೆ ಹರಕೆ ಸಲ್ಲಿಸಲು ನೀಡಿದ್ದ ನಕಲಿ ರಶೀದಿ ತಂದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಲೆಕ್ಕ ಪರಿಶೋಧನೆ ನಡೆಸಬೇಕಿದ್ದರೂ ಒಂದು ವರ್ಷದಿಂದ ಲೆಕ್ಕ ಪರಿಶೋಧನೆ ಕೈಗೊಂಡಿರಲಿಲ್ಲ.

ಭಕ್ತಾದಿಗಳು ಹರಕೆ ಸಲ್ಲಿಸಲು ಬಂದಾಗ ಅವರು ವಿವಿಧ ಸೇವೆ ಸಲ್ಲಿಸಲು ನೀಡುವ ರಶೀದಿ ನಕಲಿಯಾಗಿದ್ದು, ಅದರಲ್ಲಿ 3500 ರೂ.ವರೆಗೂ ವಸೂಲಿ ಮಾಡಲಾಗಿದೆ. ಆದರೆ ಅಂತಹ ಸೇವೆಗೆ 500 ರೂ. ಸೇರಿದಂತೆ ಇನ್ನಿತರ ಶುಲ್ಕವಿದ್ದರೂ ಅತಿ ಹೆಚ್ಚಿನ ಮೊತ್ತ ಸಂಗ್ರಹಿಸಲಾಗಿದೆ. ಕೆಲವರಿಗೆ ರಶೀದಿ ನೀಡದೆ ದುಡ್ಡು ಪಡೆದು ಹರಕೆ ತೀರಿಸಲು ಅವಕಾಶ ಕಲ್ಪಿಸಲಾಗಿದೆ. ಬೆಲ್ಲ, ಅಕ್ಕಿ ಸೇರಿದಂತೆ ಇನ್ನಿತರ ವಸ್ತುಗಳಿಂದ ತುಲಾಭಾರ ನಡೆಸುವುದರಿಂದ ಉಗ್ರಾಣದಲ್ಲಿ ಈ ವಸ್ತುಗಳ ವ್ಯತ್ಯಾಸ ಉಂಟಾಗಿದ್ದು 14 ಲಕ್ಷಕ್ಕೂ ಹೆಚ್ಚು ಹಣವನ್ನು ಹೈಟೆಕ್ ಮಾದರಿಯಲ್ಲಿ ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

Facebook Comments

Sri Raghav

Admin