ಸಚಿವರ ದೂರವಾಣಿ ಕದ್ದಾಲಿಕೆ ವಿರುದ್ಧ ಕೇಂದ್ರಕ್ಕೆ ರಾಮಲಿಂಗಾರೆಡ್ಡಿ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Phone-Thrat
ಶಿವಮೊಗ್ಗ, ಜ.14-ರಾಜ್ಯ ಸರ್ಕಾರದ ಕೆಲವು ಸಚಿವರ ದೂರವಾಣಿಗಳನ್ನು ಕದ್ದಾಲಿಸುತ್ತಿರುವ ಸಂದೇಹವಿತ್ತು. ಈ ಸಂಬಂಧ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಲಾಗುವುದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವ್ಯಾಪ್ತಿಗೆ ದೂರವಾಣಿ ಒಳಪಡುವುದರಿಂದ ಕೇಂದ್ರ ಸರ್ಕಾರವೇ ದೂರವಾಣಿ ಕದ್ದಾಲಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಕಾನೂನು ಪ್ರಕಾರ ಒಬ್ಬ ವ್ಯಕ್ತಿಯ ದೂರವಾಣಿಯನ್ನು ಕದ್ದು ಆಲಿಸುವಂತಿಲ್ಲ. ಆದರೂ ನಮ್ಮ ರಾಜ್ಯದ ಸಚಿವರು ಹಾಗೂ ಪ್ರಮುಖ ಮುಖಂಡರ ದೂರವಾಣಿಗಳನ್ನು ಕದ್ದಾಲಿಸುತ್ತಿರುವ ವಿಚಾರವನ್ನು ಬಹಳ ಹಿಂದೆಯೇ ಪ್ರಸ್ತಾಪಿಸಿದೆ. ದೂರವಾಣಿ ಕದ್ದಾಲಿಕೆ ಹೊಸ ವಿಚಾರವಲ್ಲ ಎಂದು ಹೇಳಿದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಮುಖಂಡರ ದೂರವಾಣಿ ಕದ್ದಾಲಿಕೆಗಳು ನಡೆಯುತ್ತಿವೆ ಎಂದು ಸಚಿವರು ಆರೋಪಿಸಿದರು.

Facebook Comments

Sri Raghav

Admin