ಹರಾಮಿಗಳು ಎಂದು ಕನ್ನಡಿಗರನ್ನು ಕೆರಳಿಸಿದ ಗೋವಾ ಸಚಿವ

ಈ ಸುದ್ದಿಯನ್ನು ಶೇರ್ ಮಾಡಿ

Goa--02

ಬೆಳಗಾವಿ, ಜ.14-ಕನ್ನಡಿಗರು ಹರಾಮಿಗಳು ಎಂದು ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಉದ್ದಟತನ ಮಾತುಗಳನ್ನಾಡಿ ಕನ್ನಡಿಗರನ್ನು ಕೆರಳಿಸಿದ್ದಾರೆ. ಮಹದಾಯಿ ಯೋಜನೆ ಸಂಬಂಧ ರಾಜ್ಯದ ಸ್ಥಳ ಪರಿಶೀಲನೆಗೆ ಬಂದಿದ್ದ ಸಂದರ್ಭದಲ್ಲಿ ಸಚಿವರು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ.  ಕನ್ನಡಿಗರು ಹರಾಮ್‍ಕೋರರು ಅವರು ಏನನ್ನಾದರೂ ಮಾಡಬಹುದು. ಅದಕ್ಕಾಗಿ ನಾನು ಭದ್ರತೆಯೊಂದಿಗೆ ಬಂದಿದ್ದೇನೆ ಎಂದು ಹೇಳುವ ಮೂಲಕ ತೀವ್ರ ಅವಮಾನ ಮಾಡಿದ್ದಾರೆ.

ಪಾಲ್ಯೇಕರ್ ಈ ಹೇಳಿಕೆಗೆ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ದ ಕನ್ನಡಪರ ಸಂಘಟನೆಗಳು ಕಿಡಿಕಾರಿದ್ದು , ನಿಮ್ಮ ನಾಯಕರಿಗೆ ಬುದ್ದಿ ಹೇಳಿ ನಿಮಗೆ ನಾಡಿನ ಬಗ್ಗೆ ಸ್ವಾಭಿಮಾನವಿಲ್ಲವೇ ಎಂದು ಹರಿಹಾಯ್ದಿದ್ದಾರೆ. ಗೋವಾ ನೀರಾವರಿ ಮಂತ್ರಿಯ ಈ ಉದ್ದಟತನದ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿದೆ. ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮಹಾನ್ ನಾಟಕವಾಡಿದ್ದಾರೆ. ಈಗ ರಾಜ್ಯಕ್ಕೆ ಬಂದಿರುವ ಪಾಲ್ಯೇಕರ್ ನಾಡಿನ ಜನರಿಗೆ ಅವಮಾನ ಮಾಡಿದ್ದಾರೆ. ಇವರ ಈ ವರ್ತನೆ ಖಂಡನೀಯ ಎಂದು ಕಾಂಗ್ರೆಸ್ ಹೇಳಿದೆ.

Facebook Comments

Sri Raghav

Admin