ಹೈದರಾಬಾದ್ ಪೆಟ್ರೋಲ್ ಟ್ಯಾಂಕರ್ ಅಗ್ನಿ ದುರಂತದಲ್ಲಿ 18 ಮಂದಿಗೆ ತೀವ್ರ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Untitled-1
ಹೈದರಾಬಾದ್ ಜ, 13 : ಮಹಾದುರಂತ ಒಂದು ಹೈದರಾಬಾದ್ ನಲ್ಲಿ ನಡೆದುಹೋಗಿದೆ. ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಗೆ ಬೆಂಕಿ ತಗುಲಿದ ಪರಿಣಾಮ ಹತ್ತಿರದಲ್ಲೇ ಇದ್ದ ಅಂದಾಜು 18ಕ್ಕೂ ಹೆಚ್ಚು ಮಂದಿ ಬೆಂಕಿಯ ಜ್ವಾಲೆಗೆ ಸಿಕ್ಕಿ ಗಾಯಗೊಂಡಿರುವ ಘಟನೆ ಇಲ್ಲಿನ ಮೇಡಿಪಲ್ಲಿ – ಚೆಂಗಿಚೆರ್ಲಾ ರಸ್ತೆಯಲ್ಲಿ ಸಂಭವಿಸಿದೆ.

ಒಂದು ಟ್ಯಾಂಕರ್ ನಿಂದ ಮತ್ತೊಂದು ಟ್ಯಾಂಕರ್ ಗೆ ಅಕ್ರಮವಾಗಿ ಪೆಟ್ರೋಲ್ ಅನ್ನು ವರ್ಗಾಯಿಸುತ್ತಿದ್ದರು. ಇದಕ್ಕೆ ಟ್ಯಾಂಕರ್‍ನ ಸೀಲ್ ಮಾಡಿದ್ದ ಮುಚ್ಚಳವನ್ನು ತೆರೆದು ನಂತರ ಮುಚ್ಚುವ ವೇಳೆ ಗ್ಯಾಸ್ ವೆಲ್ಡಿಂಗ್ ಮಾಡುವಾಗ ಈ ಆಗ್ನಿ ದುರಂತ ಸಂಭವಿಸಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ. ಈ ದುರಂತದಲ್ಲಿ ಗಾಯಗೊಂಡವರ ಪೈಕಿ ಹಲವರ ಸ್ಥಿತಿ ಗಂಭಿರವಾಗಿದ್ದು, ಸಾವು ಬದುಕಿನ ನಡುವೆ ಹೊರಾಡುತ್ತಿದ್ದಾರೆ. ಎಲ್ಲಾ ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಿಯರು ಹೇಳುವ ಹಾಗೇ ಘಟನೆ ನಡೆದ ಸ್ಥಳದಲ್ಲಿ ಪ್ರತಿ ದಿನ ಹತ್ತಕ್ಕೂ ಹೆಚ್ಚು ಪೆಟ್ರೋಲ್ ಟ್ಯಾಂಕರ್ ಗಳು ಇಲ್ಲಿ ನಿಲ್ಲುತ್ತಿದ್ದವು, ಆದರೆ ಘಟನೆ ನಡೆದ ವೇಳೆ ಎರಡು ಟ್ಯಾಂಕರ್ ಗಳು ಇದ್ದವು. ಎಲ್ಲಾ ಟ್ಯಾಂಕರ್ ಗಳು ಇದ್ದಿದ್ದರೆ ಭಾರಿ ದುರಂತವೇ ನಡೆಯುತಿತ್ತು ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

Facebook Comments

Sri Raghav

Admin