9400 ವೈರಿಗಳ 1 ಲಕ್ಷ ಕೋಟಿ ರೂ. ಆಸ್ತಿ ಹರಾಜಿಗೆ ಮುಂದಾದ ಕೇಂದ್ರ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

assets-01
ನವದೆಹಲಿ, ಜ.14-ಪಾಕಿಸ್ತಾನ ಮತ್ತು ಚೀನಾದ ಪೌರತ್ವ ಪಡೆದಿರುವ 9,400ಕ್ಕೂ ಹೆಚ್ಚು ವೈರಿಗಳ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹರಾಜು ಹಾಕಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಭಾರತದ ವೈರಿ ರಾಷ್ಟ್ರಗಳೆಂದೇ ಪರಿಗಣಿಸಲಾಗಿರುವ ಪಾಕಿಸ್ತಾನ ಮತ್ತು ಚೀನಾದ ಪೌರತ್ವ ಪಡೆದ ಮಂದಿಯಿಂದ ಭಾರತದಲ್ಲಿ ಬಿಟ್ಟು ಹೋಗಿರುವ ಆಸ್ತಿಗಳನ್ನು ಶತ್ರು ಸ್ವತ್ತುಗಳು ಎಂದು ಕರೆಯಲಾಗುತ್ತದೆ.

ಇಂಥ ಎಲ್ಲ ಸ್ವತ್ತುಗಳ ಸರ್ವೆ ಕಾರ್ಯವನ್ನು ಗೃಹ ಸಚಿವಾಲಯ ಪೂರ್ಣಗೊಳಿಸಿದ್ದು, ಆಸ್ತಿ ಹರಾಜಿಗೆ ಚಾಲನೆ ದೊರೆತಿದೆ. 49 ವರ್ಷಗಳಷ್ಟು ಹಳೆಯದಾದ ವೈರಿ ಸ್ವತ್ತು (ತಿದ್ದುಪಡಿ ಮತ್ತು ಮೌಲ್ಯಮಾಪನ) ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ಮಾಡಲಾಗಿತ್ತು.

Facebook Comments

Sri Raghav

Admin