ಬಾಲಕನ ಜೀವ ತೆಗೆದ ಪಟಾಕಿ..!

ಈ ಸುದ್ದಿಯನ್ನು ಶೇರ್ ಮಾಡಿ

Pataki--01

ಬೆಂಗಳೂರು,ಜ.15-ಸಿಡಿಮದ್ದು(ಪಟಾಕಿ) ಪ್ರದರ್ಶನ ವೀಕ್ಷಿಸಲು ಬಹಳ ಸಂತೋಷದಿಂದ ಪೊೀಷಕರೊಂದಿಗೆ ತೆರಳಿದ್ದ ಬಾಲಕ ಶವವಾಗಿ ಮರಳಿರುವ ಹೃದಯ ವಿದ್ರಾವಕ ಘಟನೆ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಧನುಷ್(12) ಮರತಪಟ್ಟ ಬಾಲಕ.   ಹಲಸೂರಿನ ಕೇಂಬ್ರಿಡ್ಜ್ ಲೇಔಟ್‍ನಲ್ಲಿರುವ ಲೂರ್ದ್ ಚರ್ಚ್ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೊಸ ವರ್ಷಾಚರಣೆ ಅಂಗವಾಗಿ 2ನೇ ಭಾನುವಾರದವಾದ ನಿನ್ನೆ ಸಿಡಿಮದ್ದು(ಪಟಾಕಿ) ಪ್ರದರ್ಶನ ಆಯೋಜಿಸಲಾಗಿತ್ತು.  ತ್ಯಾಗರಾಜನಗರದಲ್ಲಿರುವ ಧನುಷ್ ಪೊೀಕರು ಮಕ್ಕಳನ್ನು ಕರೆದುಕೊಂಡು ಪಟಾಕಿಗಳ ಪ್ರದರ್ಶನ ವೀಕ್ಷಿಸಲು ತೆರಳಿದ್ದರು.

ಈ ವೇಳೆ ಸಾವಿರಾರು ಮಂದಿ ಸೇರಿದ್ದರು. ರಾತ್ರಿ 9.30ರಲ್ಲಿ ಪಟಾಕಿಗಳ ಪ್ರದರ್ಶನ ಸಂದರ್ಭದಲ್ಲಿ ರಾಕೆಟ್‍ವೊಂದು ಬಂದು ಧನುಷ್ ತಲೆ ಮೇಲೆ ಬಿದ್ದಿದೆ. ಪರಿಣಾಮವಾಗಿ ಧನುಷ್ ತಲೆಯ ಎಡಭಾಗದಲ್ಲಿ ಗಂಭೀರ ಗಾಯವಾಗಿ ಕುಸಿದುಬಿದ್ದಿದಾನೆ. ತಕ್ಷಣ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕ್ಷಣಾರ್ಧದಲ್ಲಿ ಮಗ ಮೃತಪಟ್ಟಿದ್ದನ್ನು ಕಂಡ ಪೋಷಕರ ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.   ಘಟನೆ ಸಂಬಂಧ ಧನುಷ್ ಪೊೀಷಕರು ಹಲಸೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚರ್ಚ್ ಆಡಳಿತ ಮಂಡಳಿ ವಿರುದ್ದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯರ ಆಕ್ರೋಶ:

ಸಿಡಿಮದ್ದು ಪ್ರದರ್ಶನದಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು. ಅಲ್ಲದೆ ಮುನ್ನೆಚ್ಚರಿಕೆಯಾಗಿ ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್ ಹಾಗೂ ಪೊಲೀಸರನ್ನು ನಿಯೋಜಿಸಿಕೊಳ್ಳದಿರುವುದೇ ಇಂತಹ ಅನಾಹುತಕ್ಕೆ ಕಾರಣವಾಗಿದೆ ಎಮದು ಸ್ಥಳೀಯರು ದೂರಿದ್ದಾರೆ.

Facebook Comments

Sri Raghav

Admin