ಮಹದಾಯಿ ನಮ್ಮ ಹಕ್ಕು, ಅದನ್ನು ಪಡೆದೇ ಪಡೆಯುತ್ತೇವೆ: ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

MB-Patil-01
ಬೆಂಗಳೂರು, ಜ.16- ಮಹದಾಯಿ ನಮ್ಮ ಹಕ್ಕು, ಭಿಕ್ಷೆಯಲ್ಲ. ನಮ್ಮನ್ನು ಹೆದರಿಸಬೇಡಿ. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ಹಕ್ಕು ನಮಗೆ ಸಿಕ್ಕೇ ಸಿಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಮ್ಮ ಟ್ವಿಟ್ಟರ್‍ನಲ್ಲಿ ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್‍ಗೆ ತಿರುಗೇಟು ನೀಡಿದ್ದಾರೆ. ನಮ್ಮ ನಾಡ ರಕ್ಷಣೆಯ ಪಾಠ ನಿಮ್ನಿಂದ ಕಲಿಯಬೇಕಿಲ್ಲ. ನಿಮ್ಮಂಥ ಸಾವಿರ ಜನ ಬಂದರೂ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ. ಮಹದಾಯಿ ನಮ್ಮದು. ನಿಮ್ಮಿಂದ ಏನು ನಾವು ಭಿಕ್ಷೆ ಕೇಳುತ್ತಿಲ್ಲ. ನಮ್ಮ ಪಾಲಿನ ಹಕ್ಕನ್ನು ಕೇಳುತ್ತಿದ್ದೇವೆ. ಅದನ್ನು ನಾವು ಪಡೆದೇ ಪಡೆಯುತ್ತೇವೆ. ನಮ್ಮ ನಾಡಿನ ಜನರ ಬಗ್ಗೆ ತಾವು ಕೀಳಾಗಿ ಮಾತನಾಡಬೇಡಿ ಎಂದು ಅವರು ಎಚ್ಚರಿಸಿದ್ದಾರೆ.
ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರು ಬೆಳಗಾವಿಯ ಕಣಕುಂಬಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿ ಪರಿಶೀಲನೆ ಸಂದರ್ಭದಲ್ಲಿ ಕನ್ನಡಿಗರು ಹರಾಂಕೋರರು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಎಂ.ಬಿ.ಪಾಟೀಲ್ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೇಳಿಕೆ ಬಗ್ಗೆ ಬಹಿರಂಗ ಶ್ರಮಕ್ಕೆ ಆಗ್ರಹಿಸಿದ್ದಾರೆ. ನಾನು ಕೂಡ ಕಣಕುಂಬಿಗೆ ತೆರಳಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.

Facebook Comments

Sri Raghav

Admin