ಶಿರಾಡಿ ಅರಣ್ಯದಲ್ಲಿ ನಕ್ಸಲರು ಪ್ರತ್ಯಕ್ಷ, ಪೊಲೀಸರಿಂದ ಕೂಂಬಿಂಗ್ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Naxal--01

ಚಿಕ್ಕಮಗಳೂರು, ಜ.16- ಶಿರಾಡಿ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದು, ಪ್ರತಿಕಾರದ ಹತ್ಯೆ ನಡೆಸಲು ಬಂದಿದ್ದರು ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಕಾರ್ಕಳದಿಂದ ಆಗಮಿಸಿರುವ ನಕ್ಸಲ್ ನಿಗ್ರಹ ಪಡೆಯ ಎರಡು ತಂಡಗಳು ಶಿರಾಡಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಹೆಚ್ಚಿನ ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿವೆ ಎಂಬ ಮಾಹಿತಿ ಇದೆ. ಅಡ್ಡಹೊಳೆ ಪರಿಸರದ ಮಿತ್ತಮಜಲು ಎಂಬಲ್ಲಿ ಭಾನುವಾರ ಮೂವರು ಶಂಕಿತ ನಕ್ಸಲರು ಕಾಣಿಸಿಕೊಂಡಿದ್ದರು. ಅಲ್ಲದೆ, ಸುರೇಶ್ ಎಂಬುವವರ ಮನೆಯಿಂದ ಅಕ್ಕಿ ಪಡೆದುಕೊಂಡಿದ್ದರು. ಈ ಶಂಕಿತ ನಕ್ಸಲರು ಪೊಲೀಸ್ ಮಾಹಿತಿದಾರ ಎನ್ನಲಾದ ರಿಜು ಎಂಬುವರ ಹತ್ಯೆಗೈಯ್ಯಲು ಮಿತ್ತಮಜಲಿಗೆ ಬಂದಿದ್ದರು ಎಂಬುದಾಗಿ ತಿಳಿದುಬಂದಿದೆ.

2012ರಲ್ಲಿ ನಕ್ಸಲ್‍ನೊಬ್ಬನ ಹತ್ಯೆ ನಡೆದಿತ್ತು. ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ರಿಜುನನ್ನು ಹುಡುಕಾಡಿದ್ದಾರೆ. ಮಿತ್ತಮಜಲಿನ ನಿವಾಸಿ ಸುರೇಶ್ ಎಂಬುವವರಿಂದ ರಿಜು ಬಗ್ಗೆ ಮಾಹಿತಿ ಕೇಳಿದ್ದರು ಎನ್ನಲಾಗಿದ್ದು, ಪೊಲೀಸರ ಕೂಂಬಿಂಗ್ ಕಾರ್ಯಾಚರಣೆಯಿಂದ ಪ್ರತೀಕಾರದ ಹತ್ಯೆಯ ರಹಸ್ಯ ಬಯಲಾಗಿದ್ದು, ದುರಂತ ತಪ್ಪಿತಂದಾಗಿದೆ. ಒಬ್ಬ ಮಹಿಳೆ, ಇಬ್ಬರು ಪುರುಷರು ಹಾಗೂ ಇನ್ನಿಬ್ಬರು ಕಾಡಿನಲ್ಲಿದ್ದಾರೆ ಎಂಬ ಮಾಹಿತಿಯನ್ನು ಅಕ್ಕಿ ನೀಡಿದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ.

Facebook Comments

Sri Raghav

Admin