ಷೇರು ವಿನಿಮಯ ಕಟ್ಟಡದ ಮಹಡಿ ಕುಸಿದು 72 ಜನರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

building
ಜಕಾರ್ತ, ಜ.16-ದ್ವೀಪರಾಷ್ಟ್ರ ಇಂಡೋನೆಷ್ಯಾದ ಪ್ರಮುಖ ಕೇಂದ್ರಗಳಲ್ಲಿ ಒಂದಾದ ಷೇರು ವಿನಿಮಯ ಕಟ್ಟಡದ ಮಹಡಿ ಕುಸಿದು 72 ಮಂದಿ ಗಾಯಗೊಂಡಿದ್ದಾರೆ. ಅಧ್ಯಯನ ಪ್ರವಾಸಕ್ಕಾಗಿ ಸುಮಾತ್ರ ದ್ವೀಪದಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿದ್ದ ವೇಳೆ ಕಟ್ಟಡದ ಎತ್ತರಿಸಿದ ಪಾದಚಾರಿ ಮಾರ್ಗ (ವಾಕ್‍ವೇ) ಕುಸಿದು ಈ ದುರ್ಘಟನೆ ಸಂಭವಿಸಿತು. 17 ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments

Sri Raghav

Admin