ಆಫ್ ಅಥವಾ ಫುಲ್ ಅಂತೇನಿಲ್ಲ ಒಟ್ಟಿನಲ್ಲಿ ಐಎಸ್‍ಐ ಗುಣಮಟ್ಟದ ಹೆಲ್ಮೆಟ್‍ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Helmet--02-ISI

ಬೆಂಗಳೂರು, ಜ.17- ದ್ವಿಚಕ್ರ ವಾಹನ ಸವಾರರು ಐಎಸ್‍ಐ ಗುಣಮಟ್ಟದ ಹೆಲ್ಮೆಟ್‍ಗಳನ್ನೇ ಬಳಸಬೇಕೆಂದು ಆದೇಶಿಸಲಾಗಿದೆಯೇ ವಿನಃ ಆಫ್ ಹೆಲ್ಮೆಟ್ ಅಥವಾ ಫುಲ್ ಹೆಲ್ಮೆಟ್ ಎಂಬ ವರ್ಗೀಕರಣ ಮಾಡಿಲ್ಲ. ಸಾರ್ವಜನಿಕರು ನಿಯಮ ಪಾಲನೆಯಲ್ಲಿ ಗೊಂದಲ ಪಡುವುದು ಬೇಡ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ದಯಾನಂದ್ ಸ್ಪಷ್ಟಪಡಿಸಿದ್ದಾರೆ.  ಕಾನೂನಿನಡಿಯಲ್ಲಿ ಆಫ್ ಅಥವಾ ಫುಲ್ ಹೆಲ್ಮೆಟ್ ಎಂಬ ವರ್ಗೀಕರಣ ಇರುವುದಿಲ್ಲ. ಆಫ್ ಹೆಲ್ಮೆಟ್‍ಗಳನ್ನು ನಿಷೇಧಿಸಲ್ಪಟ್ಟಿರುವುದಿಲ್ಲ. ಐಎಸ್‍ಐ ಗುರುತಿನ ಹೆಲ್ಮೆಟ್‍ಗಳನ್ನು ಧರಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. ಸಾರ್ವಜನಿಕರು ಯಾವುದೇ ಗೊಂದಲ ಪಡುವ ಅಗತ್ಯವಿಲ್ಲ. ಐಎಸ್‍ಐ ಗುರುತಿನ ಹೆಲ್ಮೆಟ್ ಮಾತ್ರ ಕಡ್ಡಾಯ ಮಾಡಲಾಗಿದೆ ಎಂದು ವಿವರಿಸಿದ್ದಾರೆ.

Facebook Comments

Sri Raghav

Admin