ಕಾಶಿನಾಥ್ ಅವರೇ ನನ್ನ ಪಾಲಿನ ದೇವರು : ಅಭಿನಯ

ಈ ಸುದ್ದಿಯನ್ನು ಶೇರ್ ಮಾಡಿ

Kashinath--07
ಬೆಂಗಳೂರು, ಜ.18-ನಾನು ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದೇನೆ ಎಂಬುದಕ್ಕೆ ಕಾಶಿನಾಥ್ ಅವರೇ ಕಾರಣ. ಅವರು ನನ್ನ ಪಾಲಿನ ದೇವರು. ಅವರು ಇಲ್ಲ ಎಂಬುದನ್ನು ನಂಬಲು ಸಾಧ್ಯವೇ ಇಲ್ಲ ಎಂದು ಕಣ್ಣೀರಿಟ್ಟವರು ನಟಿ ಅಭಿನಯ. ಕಾಶಿನಾಥ್ ಅವರ ನಿಧನಕ್ಕೆ ಸಂತಾಪ ಸೂಚಿಸಿ ಕಣ್ಣೀರಿಡುತ್ತಲೇ ಪ್ರತಿಕ್ರಿಯೆ ನೀಡಿದ ಅವರು, ಕಾಶಿನಾಥ್ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರು. ಅನುಭವ ಚಿತ್ರದ ಮೂಲಕ ನನಗೆ ಅವಕಾಶ ಕಲ್ಪಿಸಿಕೊಟ್ಟವರು. ಅವರು ನನಗೆ ತಂದೆ ಸಮಾನ. ಬಹಳಷ್ಟು ಚಿತ್ರಗಳಲ್ಲಿ ನನಗೆ ಅವಕಾಶ ಕೊಟ್ಟರು. ಅವರು ಕೊಟ್ಟ ಅವಕಾಶದಿಂದ ನಾನು ಚಲನಚಿತ್ರದಲ್ಲಿ ಬೆಳೆಯಲು ಸಾಧ್ಯವಾಯಿತು. ಅವರು ನನ್ನ ಪಾಲಿನ ದೇವರು ಎಂದು ಅಭಿನಯ ದುಃಖ ವ್ಯಕ್ತಪಡಿಸಿದರು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

Facebook Comments

Sri Raghav

Admin