ಪಶ್ಚಿಮಘಟ್ಟದಲ್ಲಿ ಮುಂದುವರೆದ ಕೂಬಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Naxal--01
ಚಿಕ್ಕಮಗಳೂರು,ಜ.18-ಕಳೆದ ಭಾನುವಾರ ನಕ್ಸಲರು ಪ್ರತ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹದಳ ಪಶ್ಚಿಮ ಘಟ್ಟದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆದಿದೆ.  ಶೃಂಗೇರಿಯ ಕೆರೆಕಟ್ಟೆ, ದೇವಾಲೆ ಕೊಪ್ಪಗಳಲ್ಲಿ ಎಎನ್‍ಎಫ್ ಮೂರು ತಂಡಗಳನ್ನು ರಚಿಸಿ ಕಾರ್ಕಳ ಮೇಗೂರು, ಮೆಣಸಿನ ಹಾಡ್ಯ ಜಯಪುರ, ಹಂಚಿನಕೊಡಿಗೆ, ಹೆಗ್ಗೂರು ಕೊಡಿಗೆ, ಕಿಗ್ಗವ ನರಸಿಂಹ ಪರ್ವತ, ಕೆಸಗೂರು, ಹಾದಿ ಅಜರತ್,ಗೂಲಗುಂಡಿ ಮನೆ, ಕಡಕಲ್ಲು , ಕಿರೂರು ಈ ಭಾಗಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದು , ಇಂದು ಕೂಡ ಮುಂದುವರೆದಿದೆ.

ನಕ್ಸಲರು ಭೇಟಿ ನೀಡಿರುವ ಮಿತ್ರಾಮದಲೂ ಶಿರಡಿ ಗ್ರಾಮದ ಅಂಚಿನಲ್ಲಿದೆ. ಇಲ್ಲಿ ದಲಿತ ಕುಟುಂಬಗಳು ನೆಲೆಸಿವೆ. ಹಾಗಾಗಿ ಇಲ್ಲಿಗೆ ಭೇಟಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಅಂದಾಜಿಸಲಾಗಿದ್ದು, ಯಾವ ಕಡೆಯಿಂದ ಬಂದಿದ್ದಾರೆ ಎಂಬುದನ್ನು ಪತ್ತೆಹಚ್ಚುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ, ಶೃಂಗೇರಿ ಪೊಲೀಸರೊಂದಿಗೆ ಸಂಪರ್ಕ ಹೊಂದಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಕ್ಸಲ್ ನಿಗ್ರಹದ ಪೊಲೀಸ್ ಶೃಂಗೇರಿ ಪೊಲೀಸ್ ಜಂಟಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin