ಬಿಜೆಪಿ ಟಿಕೆಟ್ ಆಕಾಂಕ್ಷಿಯ ಕಾರಿನ ಚಕ್ರದ ಬೋಲ್ಟ್ ಗಳನ್ನು ಕಳಚಿದ ಕಿಡಿಗೇಡಿಗಳು

ಈ ಸುದ್ದಿಯನ್ನು ಶೇರ್ ಮಾಡಿ

Huchchaiha--01
ತುಮಕೂರು, ಜ.18- ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ , ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೈ.ಎಚ್.ಹುಚ್ಚಯ್ಯ ಅವರ ಕಾರಿನ ಚಕ್ರದ ಬೋಲ್ಟ್ ಗಳನ್ನು ಕಿಡಿಗೇಡಿಗಳು ಕಳಚಿದ ಪರಿಣಾಮ ಕಾರು ಉರುಳಿ ಬಿದ್ದಿದ್ದು , ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು , ಇದು ರಾಜಕೀಯ ದುರುದ್ದೇಶದಿಂದ ಈ ಕೆಲಸ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  ಜಿ.ಪಂ. ಕಚೇರಿ ಬಳಿ ಕಾರು ನಿಲ್ಲಿಸಿದ್ದಾಗ ಕಿಡಿಗೇಡಿಗಳು ಅವರ ಇನೋವಾ ಕಾರಿನ ಎಡ ಭಾಗದ ಚಕ್ರದ ಬೋಲ್ಟ್‍ಗಳನ್ನು ಕಳಚಲಾಗಿದ್ದು , ಕೆಲಸ ಮುಗಿಸಿಕೊಂಡು ವಾಪಸ್ ಹೋಗವಾಗ ದಾನ ಪ್ಯಾಲೇಸ್ ಸಮೀಪ ಕಾರು ಅಪಘಾತಕ್ಕೆ ಈಡಾಗಿದ್ದು , ಯಾವುದೇ ಅಪಾಯ ಸಂಭವಿಸಿಲ್ಲ.  ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಹುಚ್ಚಯ್ಯ ಅವರು ಈ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಶಂಕಿಸಿದ್ದಾರೆ.

ಈ ಅಪಘಾತವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ ಅವರು ನಗರ ಇನ್ಸ್‍ಪೆಕ್ಟರ್ ಚಂದ್ರಶೇಖರ್ ಅವರಿಗೆ ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

Facebook Comments

Sri Raghav

Admin