ಮಾಜಿ ಮೇಯರ್ ಕೆ.ಎಚ್.ಎನ್.ಸಿಂಹ ವಿಧಿವಶ, ಗೌರವಾರ್ಥ ಬಿಬಿಎಂಪಿಗೆ ರಜೆ

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಜ.18- ಮಾಜಿ ಮೇಯರ್ ಕೆ.ಎಚ್.ಎನ್.ಸಿಂಹ ಅವರು ವಿಧಿವಶರಾಗಿದ್ದು, ಮೃತರ ಸ್ಮರಣಾರ್ಥ ಬಿಬಿಎಂಪಿಗೆ ಇಂದು ರಜೆ ಘೋಷಿಸಲಾಗಿದೆ. 79 ವರ್ಷ ವಯಸ್ಸಿನ ಕೆ.ಎಚ್.ಎನ್.ಸಿಂಹ ಅವರು ಪತ್ನಿ ಸರೋಜಾ ದೇವಿ ಹಾಗೂ ಐವರು ಮಕ್ಕಳನ್ನು ಅಗಲಿದ್ದಾರೆ. ಎರಡು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದ ದಲಿತ ನಾಯಕ ಸಿಂಹ ಅವರು 1998-99ನೆ ಸಾಲಿನಲ್ಲಿ ನಗರದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿದ್ದರು.

ಇವರ ಅವಧಿಯಲ್ಲಿ ನಗರದಲ್ಲಿ ಅಭಿವೃದ್ಧಿಕಾರ್ಯ ಚುರುಕುಗೊಂಡಿದ್ದವು. ಬೆಂಗಳೂರಿನ ಪ್ರಪ್ರಥಮ ಮೇಲ್ಸೇತುವೆ ಇವರ ಕಾಲದಲ್ಲೇ ಆರಂಭಗೊಂಡಿದ್ದು, ಕೆಳಸೇತುವೆ ಎಂಬ ಕಾನ್‍ಸೆಪ್ಟ್ ಹುಟ್ಟಿಕೊಂಡಿದ್ದು ಇವರ ಅವಧಿಯಲ್ಲೇ.
ಇವರು ದಲಿತಪರ ಚಿಂತಕರಾಗಿದ್ದರು. ಪೌರ ಕಾರ್ಮಿಕರಿಗೂ ಮುಂಬಡ್ತಿ ನೀಡಲು ಇವರೇ ಚಾಲನೆ ನೀಡಿದ್ದರು. ಹಾಗಾಗಿ ಹಲವಾರು ಪೌರ ಕಾರ್ಮಿಕರು ಉನ್ನತ ಸ್ಥಾನಕ್ಕೆ ಏರುವಂತಾಯಿತು. ನಾಳೆ ಮಧ್ಯಾಹ್ನ 12 ಗಂಟೆಗೆ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಸಂತಾಪ: ಬೆಂಗಳೂರು ನಗರದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದ ದಲಿತ ನಾಯಕ ಹಾಗೂ ಮಾಜಿ ಮೇಯರ್ ಕೆ.ಎಚ್.ಎನ್.ಸಿಂಹ ಅವರ ನಿಧನಕ್ಕೆ ಮೇಯರ್ ಸಂಪತ್‍ರಾಜ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್, ಮಾಜಿ ಮೇಯರ್‍ಗಳಾದ ಎಸ್.ಕೆ.ನಟರಾಜ್, ಕಟ್ಟೆ ಸತ್ಯನಾರಾಯಣ್, ವೆಂಕಟೇಶ್‍ಮೂರ್ತಿ, ಮಂಜುನಾಥರೆಡ್ಡಿ, ಜಿ.ಪದ್ಮಾವತಿ ಮತ್ತಿತರರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin