ಇನ್ನೂ ಪತ್ತೆಯಾಗಿಲ್ಲ ಪೊಲೀಸರಿಂದ ಕಸಿದುಕೊಂಡು ಹೋಗಿದ್ದ ಬಂದೂಕು

ಈ ಸುದ್ದಿಯನ್ನು ಶೇರ್ ಮಾಡಿ

Firing-Police-02

ಬೆಂಗಳೂರು, ಜ.19-ಕರ್ತವ್ಯ ನಿರತ ಪೊಲೀಸ್ ಕಾನ್‍ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ .303 ಬಂದೂಕು ಕಸಿದುಕೊಂಡು ಪರಾರಿಯಾಗಿರುವ ಆರೋಪಿಗಳು ಹಾಗೂ ಬಂದೂಕು ಇನ್ನು ಪತ್ತೆಯಾಗಿಲ್ಲ.  ನಿನ್ನೆಯಿಂದಲೂ ಬಂದೂಕಿಗಾಗಿ ಕೊಡಿಗೆಹಳ್ಳಿ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ.  ಆರೋಪಿಗಳು ಬಂದೂಕನ್ನು ಬಿಸಾಡಿ ಪರಾರಿಯಾಗಿರಬಹುದೆಂಬ ಶಂಕೆ ಮೇರೆಗೆ ಘಟನೆ ನಡೆದ ಸುತ್ತಮುತ್ತಲ ಪ್ರದೇಶಗಳಲ್ಲಿ, ರಾಜಕಾಲುವೆ, ಚರಂಡಿ ಪೊದೆಗಳ ಬಳಿ ಹುಡುಕಾಟ ನಡೆಸುತ್ತಿದ್ದು , ಇನ್ನೂ ಪತ್ತೆಯಾಗಿಲ್ಲ. ಯಾವ ಆರೋಪಿಗಳು ಕಾನ್‍ಸ್ಟೇಬಲ್ ಮೇಲೆ ಹಲ್ಲೆ ನಡೆಸಿ ಬಂದೂಕು ತೆಗೆದುಕೊಂಡು ಹೋಗಿದ್ದಾರೆಂಬ ಬಗ್ಗೆ ತನಿಖೆ ಚುರುಕುಕೊಂಡಿದೆ.

ಘಟನಾ ಸ್ಥಳದಲ್ಲಿನ ಸಿಸಿ ಟಿವಿಯ ಪುಟೇಜ್‍ಗಳನ್ನು ಪೊಲೀಸರು ಪಡೆದು ತನಿಖೆ ನಡೆಸುತ್ತಿದ್ದಾರೆ.  ಕೊಡಿಗೆಹಳ್ಳಿ ಠಾಣೆಯ ಕಾನ್‍ಸ್ಟೇಬಲ್‍ಗಳಾದ ಪರಮೇಶ್ವರಪ್ಪ, ಸಿದ್ದಪ್ಪ ಅವರು ನಿನ್ನೆ ಬೆಳಗಿನ ಜಾವ ಗಸ್ತಿನಲ್ಲಿದ್ದಾಗ ನಾಲ್ಕೈದು ಮಂದಿ ದುಷ್ಕರ್ಮಿಗಳು ಕಳ್ಳತನಕ್ಕೆ ಹೊಂಚು ಹಾಕಿ ಕುಳಿತಿದ್ದಾಗ ಇವರ ಬಳಿ ಹೋದ ಕಾನ್‍ಸ್ಟೇಬಲ್‍ಗಳ ಮೇಲೆಯೇ ಹಲ್ಲೆ ನಡೆಸಿ .303 ಬಂದೂಕನ್ನು ತೆಗೆದುಕೊಂಡು ಪರಾರಿಯಾಗಿದ್ದರು.

Facebook Comments

Sri Raghav

Admin