ಗರ್ಭಿಣಿಯಾದ ನ್ಯೂಜಿಲೆಂಡ್ ಪ್ರಧಾನಿ ಜಾಸಿಂಡಾ ಅಡೆರ್ನ್, ವಿಶೇಷತೆ ಏನು ಗೊತ್ತೆ ..!

ಈ ಸುದ್ದಿಯನ್ನು ಶೇರ್ ಮಾಡಿ

Jacinda-Ardern-02
ವೆಲ್ಲಿಂಗ್ಟನ್, ಜ.19-ನ್ಯೂಜಿಲೆಂಡ್ ಪ್ರಧಾನಮಂತ್ರಿ ಜಾಸಿಂಡಾ ಅಡೆರ್ನ್ ಗರ್ಭವತಿಯಾಗಿದ್ದಾರೆ. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅವರು ಘೋಷಿಸುವ ಮೂಲಕ ಅಧಿಕಾರದಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಲಿರುವ ದೇಶದ ಪ್ರಥಮ ಅತ್ಯುನ್ನತ ನಾಯಕಿ ಎಂಬ ಹೆಸರಿಗೂ ಪಾತ್ರವಾಗಲಿದ್ದಾರೆ. ಕಳೆದ ವರ್ಷ ಅಕ್ಟೋಬರ್‍ನಲ್ಲಿ ನ್ಯೂಜಿಲೆಂಡ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ 37 ವರ್ಷದ ಜಾಸಿಂಡಾ ಮಹಿಳೆಯ ವೃತ್ತಿ ಅವಕಾಶಕ್ಕೆ ಗರ್ಭಧಾರಣೆಯು ಅಡ್ಡಿಯಾಗದು ಎಂದು ಚುನಾವಣೆ ಪೂರ್ವದಲ್ಲೇ ಹೇಳುವ ಮೂಲಕ ಸುದ್ದಿ ಮಾಡಿದ್ದರು. ಜಾಸಿಂಡಾ ಇಂದು ತಮ್ಮ ಬಾಳ ಸಂಗಾತಿ ಕ್ಲಾರ್ಕ್ ಗೇಫೋರ್ಡ್ ಅವರೊಂದಿಗೆ ತಮ್ಮ ನಿವಾಸದಲ್ಲಿ ತಾವು ಗರ್ಭಧರಿಸಿರುವುದಾಗಿ ಪ್ರಕಟಿಸಿದರು.

Facebook Comments

Sri Raghav

Admin