ಹನಿಕೇಕ್ ತಂದ ಆಪತ್ತು, ಒಂದೇ ಕುಟುಂಬದ ಹತ್ತು ಮಕ್ಕಳು ಅಸ್ವಸ್ಥ

ಈ ಸುದ್ದಿಯನ್ನು ಶೇರ್ ಮಾಡಿ

Hiney-Cake--02
ಗದಗ, ಜ.19-ಹನಿಕೇಕ್ ತಿಂದು ಒಂದೇ ಕುಟುಂಬದ ಹತ್ತು ಮಕ್ಕಳು ಅಸ್ವಸ್ಥರಾಗಿರುವ ಘಟನೆ ಶಿರಾಹಟ್ಟಿ ತಾಲೂಕಿನ ಆದ್ರಳ್ಳಿಯಲ್ಲಿ ನಡೆದಿದೆ. ತನು(2), ಅಶ್ವಿನಿ(2), ಸುವರ್ಣ(7), ನೇತ್ರಾ (9), ನೀಲವ್ವ (6), ಸುವರ್ಣ (7), ಜಯಶ್ರೀ(3), ಸ್ವಪ್ನಾ (4), ಷಣ್ಮುಖ(14) ಉಡಚವ್ವ ಅವರುಗಳು ಅಸ್ವಸ್ಥರಾಗಿದ್ದು, ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ರಾತ್ರಿ ಆದ್ರಳ್ಳಿ ಗ್ರಾಮದ ಉಮೇಶ್‍ವಡ್ಡರ ಕುಟುಂಬದ ಈ ಹತ್ತು ಮಕ್ಕಳು ಹನಿಕೇಕ್ ತಿಂದು ಮಲಗಿದ್ದರು. ಸ್ವಲ್ಪ ಹೊತ್ತಿನಲ್ಲೇ ಎಲ್ಲಾ ಮಕ್ಕಳಿಗೂ ವಾಂತಿ-ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

Facebook Comments

Sri Raghav

Admin