ಇನ್ನೆರಡು ಮೂರು ಗಂಟೆಗಳೊಳಗೆ ತಹಬದಿಗೆ ಬರಲಿದೆ ಬೆಳ್ಳಂದೂರು ಕೆರೆ ಬೆಂಕಿ

ಈ ಸುದ್ದಿಯನ್ನು ಶೇರ್ ಮಾಡಿ

Bellanguru--02
ಬೆಂಗಳೂರು, ಜ.20-ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಂಡಿರುವ ಬೆಂಕಿ ಇನ್ನೆರಡು ಮೂರು ಗಂಟೆಗಳೊಳಗೆ ತಹಬದಿಗೆ ಬರಲಿದೆ ಎಂದು ಅಗ್ನಿಶಾಮಕ ದಳದ ನಿರ್ದೇಶಕರಾದ ರಮೇಶ್ ತಿಳಿಸಿದ್ದಾರೆ.  ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡುತ್ತಿರುವ ಅವರು ಈ ಸಂಜೆಯೊಂದಿಗೆ ಮಾತನಾಡಿ, ಬೆಂಕಿ ನಂದಿಸುತ್ತಿರುವ ಕಾರ್ಯಾಚರಣೆಯನ್ನು ವಿವರಿಸಿದರು.   100ಕ್ಕೂ ಹೆಚ್ಚು ಸಿಬ್ಬಂದಿಗಳು 16 ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬಹುತೇಕ ತಹಬದಿಗೆ ಬಂದಿದೆ. ಕೆಲವೇ ಗಂಟೆಗಳಲ್ಲಿ ಬೆಂಕಿ ಪೂರ್ಣ ನಂದಿಸಲಾಗುವುದು ಎಂದು ಹೇಳಿದರು.

ನಿನ್ನೆ ಮಧ್ಯಾಹ್ನ 2.30ರ ಸಂದರ್ಭದಲ್ಲಿ ಈ ಬಗ್ಗೆ ನಮಗೆ ಮಾಹಿತಿ ಬಂದಿತ್ತು.ತಕ್ಷಣ ನಾವು ಸ್ಥಳಕ್ಕೆ ಧಾವಿಸಿ ನಿರಂತರವಾಗಿ ಕಾರ್ಯಚರಣೆ ಕೈಗೊಂಡಿದ್ದೇವೆ. ಬೆಂಕಿ ನಂದಿಸುವ ಸಂದರ್ಭದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದರು. ಇಲ್ಲಿನ ಬೆಳ್ಳಂದೂರು ಕೆರೆಯಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಳ್ಳುತ್ತಿರುತ್ತದೆ. ಕೆರೆಯ ನೀರನ್ನೇ ಬಳಸಿ ಸತತವಾಗಿ 24 ಗಂಟೆಗಳಿಂದ ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

Facebook Comments

Sri Raghav

Admin