ಕುಟುಂಬದವರು, ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ದುನಿಯಾ ವಿಜಿ

ಈ ಸುದ್ದಿಯನ್ನು ಶೇರ್ ಮಾಡಿ

Vijay--02
ಬೆಂಗಳೂರು, ಜ.20-ಬ್ಲ್ಯಾಕ್ ಕೋಬ್ರಾ ಎಂದೇ ಖ್ಯಾತಿ ಪಡೆದಿರುವ ದುನಿಯಾ ವಿಜಿ ಇಂದು ತಮ್ಮ ಕುಟುಂಬ ವರ್ಗದವರು, ಸ್ನೇಹಿತರು ಹಾಗೂ ಅಭಿಮಾನಿಗಳೊಂದಿಗೆ 44ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು. ತನ್ನ ಹೆಚ್ಚಿನ ನಟನ ಹುಟ್ಟುಹಬ್ಬದ ಶುಭಾಷಯ ಕೋರಲೆಂದು ರಾಜ್ಯದ ವಿವಿಧ ಭಾಗಗಳಿಂದ ಬಂದ ಅಭಿಮಾನಿಗಳು ಹೊಸ್ಕೆರೆಯಲ್ಲಿರುವ ವಿಜಿ ಅವರ ಮನೆ ಮುಂದೆ ಜಮಾಯಿಸಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ದುನಿಯಾ, ಚಂಡ, ಜಾನಿ ಮೇರ ನಾಮ್, ದನ ಕಾಯೋನು, ಮಾಸ್ತಿಗುಡಿ, ಆರ್‍ಎಕ್ಸ್ ಸೂರಿ, ಭೀಮಾತೀರದಲ್ಲಿ , ಪುಟ್ಟ, ರಜನಿಕಾಂತ್, ಶಿವಾಜಿನಗರ,ಜಾಕ್ಸನ್, ಜರಸಂಧಾ, ಜಂಗ್ಲಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆರ್.ಚಂದ್ರ ಅವರ ನಿರ್ದೇಶನದ ರನರ್ ಚಿತ್ರವು ಗಣರಾಜ್ಯೋತ್ಸವದ ದಿನ ತೆರೆಗೆ ಬರಲಿದ್ದು, ವಿಜಿ ಅಭಿನಯದ ಕುಸ್ತಿ ಚಿತ್ರವು ಸೆಟ್ಟೇರಲಿದೆ   ಈಗಾಗಲೇ ದುನಿಯಾ ವಿಜಿ ನಿರ್ಮಾಣದ ಜಾನಿ ಜಾನಿ ಎಸ್ ಪಪ್ಪ ಚಿತ್ರದ ಚಿತ್ರೀಕರಣವೂ ಪೂರ್ಣಗೊಂಡಿದೆ.   ನಟ ರಂಗಾಯಣ ರಘು, ನಿರ್ದೇಶಕ ಆರ್.ಚಂದ್ರು, ನಿರ್ಮಾಪಕ ಮುನೇಂದ್ರ, ಗಣೇಶ್, ಯೋಗರಜ್ ಭಟ್ ಸೇರಿದಂತೆ ಮತ್ತಿತರ ಚಿತ್ರದ ಗಣ್ಯರು ದುನಿಯಾ ವಿಜಯ್ ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin