ಪದ್ಮಾವತ್ ಸಿನಿಮಾ ವಿವಾದ : ಹಿರಿಯ ವಕೀಲ ಹರೀಶ್ ಸಾಳ್ವೆಗೆ ಜೀವ ಬೆದರಿಕೆ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

Padmavat--01
ನವದೆಹಲಿ, ಜ.20-ವಿವಾದಾತ್ಮಕ ಪದ್ಮಾವತ್ ಸಿನಿಮಾದ ನಿರ್ಮಾಪಕರ ಪರ ಸುಪ್ರೀಂಕೋರ್ಟ್‍ನಲ್ಲಿ ವಕಾಲತ್ತು ವಹಿಸಿರುವ ಖ್ಯಾತ ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ಶ್ರೀರಜಪೂತ್ ಕರ್ಣಿ ಸೇನೆಯಿಂದ ಪ್ರಾಣ ಬೆದರಿಕೆ ಕರೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಸಾಳ್ವೆ ಅವರ ಕಚೇರಿ ಮತ್ತು ಮನೆಗೆ ದೆಹಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ.  ಸಾಳ್ವೆ ಅವರು ದೂರು ನೀಡಿದ್ದು, ದೆಹಲಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.  ಪದ್ಮಾವತ್ ಚಿತ್ರಕ್ಕೆ ಎದುರಾಗಿದ್ದ ವಿಘ್ನಗಳು ನಿವಾರಣೆಯಾಗಿ ಜ.25ರಂದು ಬಿಡುಗಡೆಯಾಗುತ್ತಿರುವುದರಿಂದ ಕರ್ಣಿ ಸೇನಾ ತೀವ್ರ ಅಸಮಾಧಾನಗೊಂಡಿದೆ. ಈ ಹಿನ್ನೆಲೆಯಲ್ಲಿ ನಿರ್ಮಾಪಕರ ಪರ ವಕೀಲ ಹರೀಶ್ ಸಾಳ್ವೆ ಅವರಿಗೆ ಸೇನಾದ ಕಾರ್ಯಕರ್ತರು ಕರೆ ಮಾಡಿ ಕೊಲ್ಲುವ ಬೆದರಿಕೆ ಹಾಕಿದ್ದಾರೆ.

ಈ ಬಗ್ಗೆ ಸಾಳ್ವೆ ಅವರು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪದ್ಮಾವತ್ ಸಿನಿಮಾ ಚಿತ್ರೀಕರಣ ಆರಂಭದಿಂದಲೂ ಕರ್ಣಿ ಸೇನೆ ತೀವ್ರ ವಿರೋಧ ವ್ಯಕ್ತಪಡುತ್ತಲೇ ಇದೆ. ರಜಪೂತ್ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಸ್ತಾನದಲ್ಲಿ ಶೂಟಿಂಗ್ ವೇಳೆ ಸೆಟ್ ಮೇಲೆ ದಾಳಿ ನಡೆಸಿದ ಕಾರ್ಯಕರ್ತರು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿ ದಾಂಧಲೆ ಮಾಡಿತ್ತು.

Facebook Comments

Sri Raghav

Admin