ಶಾಸಕ ದಿ.ಚಿಕ್ಕಮಾದು ಅವರ ಪುತ್ರನ ಚಿತ್ತ ಕಾಂಗ್ರೆಸ್‍ನತ್ತ

ಈ ಸುದ್ದಿಯನ್ನು ಶೇರ್ ಮಾಡಿ

Chikkamadu--01
ಬೆಂಗಳೂರು, ಜ.20- ಎಚ್‍ಡಿ ಕೋಟೆ ಶಾಸಕ ದಿ.ಚಿಕ್ಕಮಾದು ಪುತ್ರ ಅನಿಲ್ ಕಾಂಗ್ರೆಸ್‍ನತ್ತ ಒಲವು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ಕೂಡ ನಡೆಸಿದ್ದಾರೆ. ಜೆಡಿಎಸ್ ಶಾಸಕರಾಗಿದ್ದ ಚಿಕ್ಕಮಾದು ಅವರು ಇತ್ತೀಚೆಗೆ ನಿಧನರಾಗಿದ್ದರು. ಎಚ್‍ಡಿ ಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಚಿಕ್ಕಣ್ಣ ಅವರನ್ನು ಜೆಡಿಎಸ್ ತನ್ನತ್ತ ಸೆಳೆಯಲು ಪ್ರಯತ್ನಿಸಿತ್ತು. ಇದರಿಂದ ಸಹಜವಾಗಿಯೇ ಚಿಕ್ಕಮಾದು ಪುತ್ರ ಅನಿಲ್ ಅವರು ಬೇಸರಗೊಂಡಿದ್ದರು ಎಂದು ಹೇಳಲಾಗಿದ್ದು, ಅವರು ಕಾಂಗ್ರೆಸ್ ಸೇರಲು ಒಲವು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ಸಂಬಂಧ ಈ ಸಂಜೆಯೊಂದಿಗೆ ಮಾತನಾಡಿರುವ ಚಿಕ್ಕಮಾದು ಪುತ್ರ ಸುನಿಲ್ ಅವರು ಎಲ್ಲ ಪಕ್ಷಗಳವರು ನನ್ನನ್ನು ಕರೆಯುತ್ತಿದ್ದಾರೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತನಾಡಿದ್ದೇನೆ. ಕ್ಷೇತ್ರದ ಜನರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

Facebook Comments

Sri Raghav

Admin