ಎಸ್.ಬಿ.ಐನಲ್ಲಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

sbi-1

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ದಲ್ಲಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 121
ಹುದ್ದೆಗಳ ವಿವರ
1.ವ್ಯವಸ್ಥಾಪಕರು (ಕ್ರೆಡಿಟ್ ಅನಾಲಿಸ್ಟ್) – 35
2.ಮುಖ್ಯ ವ್ಯವಸ್ಥಾಪಕರು (ಕ್ರೆಡಿಟ್ ಅನಾಲಿಸ್ಟ್) – 30
3.ಮುಖ್ಯ ವ್ಯವಸ್ಥಾಪಕರು (ಬಿಜಿನಸ್ ಡೆವಲಪ್‍ಮೆಂಟ್, ಮಾರ್ಕೇಟಿಂಗ್, ಎಂಐಎಸ್ ರಿರ್ಪೋಟಿಂಗ್) – 05
4.ವ್ಯವಸ್ಥಾಪಕರು (ಬಿಜಿನಸ್ ಡೆವಲಪ್‍ಮೆಂಟ್, ಮಾರ್ಕೇಟಿಂಗ್) -20
5.ವ್ಯವಸ್ಥಾಪಕರು (ಹೈ ವ್ಯಾಲೂ ಅಗ್ರಿ ಬ್ಯುಸಿನೆಸ್ ಡೆವಲಪ್ ಮೆಂಟ್) – 04
6. ವ್ಯವಸ್ಥಾಪಕರು (ಹೆಚ್‍ಎನ್‍ಐ ಬ್ಯಾಂಕಿಂಗ್ ಮತ್ತು ರಿಲೇಷನ್ ಶಿಫ್ ಮ್ಯಾನೇಜ್ ಮೆಂಟ್) – 08
7.ಇತರ ಹುದ್ದೆಗಳು – 19

ವಿದ್ಯಾರ್ಹತೆ : ಕ್ರ ಸಂ 1 ರಿಂದ 4 ರ ಹುದ್ದೆಗಳಿಗೆ ಸಿಎ/ಎಂಬಿಎ/ಪಿಜಿಡಿಎಂ, ಕ್ರ ಸಂ 5ರ ಹುದ್ದೆಗೆ ಎಂಬಿಎ/ಪಿಜಿಡಿಎಂ, ಕ್ರ ಸಂ 6ರ ಹುದ್ದೆಗೆ ಎಂಬಿಎ ಪದವಿ ಪಡೆದಿರಬೇಕು. ಇತರ ಹುದ್ದೆಗಳ ವಿದ್ಯಾರ್ಹತೆಗಾಗಿ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ವಯೋಮಿತಿ : ಎಲ್ಲಾ ಹುದ್ದೆಗಳಿಗೂ ಕನಿಷ್ಠ ವಯೋಮಿತಿಯನ್ನು 25 ವರ್ಷ ನಿಗದಿಮಾಡಲಾಗಿದ್ದು, ಗರಿಷ್ಠ ವಯೋಮಿತಿಯನ್ನು ಕ್ರ. ಸಂ 1,4,6ರ ಹುದ್ದೆಗೆ 35, ಕ್ರ. ಸಂ 2,3,5ರ ಹುದ್ದೆಗೆ 38 ವರ್ಷಕ್ಕೆ ಮಿತಿಗೂಳಿಸಿದೆ. ಇತರ ಹುದ್ದೆಗಳ ವಯೋಮಿತಿ ತಿಳಿಯಲು ಅಧಿಕೃತ ಅಧಿಸೂಚನೆಯನ್ನು ನೋಡಿ. ವಯೋಮಿತಿಯಲ್ಲಿ ಮೀಸಲಾತಿ ಪಡೆಯುವವರಿಗೆ ಸಡಿಲತೆ ನೀಡಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 600 ರೂ, ಪ.ಜಾ, ಪ.ಪಂ ದವರಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04-02-2018

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ  https://bank.sbi/careers  ಅಥವಾ www.sbi.co.in/careers ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ

 

Facebook Comments