ದುಬಾರೆ ಶಿಬಿರದಿಂದ ಮೂರು ಸಾಕಾನೆಗಳು ಹೊರರಾಜ್ಯಕ್ಕೆ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Elephant-02
ಕೊಡಗು, ಜ.22-ಮಾವುತರ ವಿರೋಧದ ನಡುವೆಯೂ ಹೊರರಾಜ್ಯಕ್ಕೆ 3 ಸಾಕಾನೆಗಳನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದುಬಾರೆ ಅರಣ್ಯ ಪ್ರದೇಶದಲ್ಲಿರುವ ಸಾಕಾನೆಗಳ ಶಿಬಿರದ ತೀರ್ಥರಾಮ, ಪರಶುರಾಮ, ಅಜಯ್ ಎಂಬ ಆನೆಗಳನ್ನು ಛತ್ತೀಸ್‍ಗಡಕ್ಕೆ ಸ್ಥಳಾಂತರಿಸಲು ಅಧಿಕಾರಿಗಳೂ ಸಿದ್ಧತೆ ನಡೆಸಿದ್ದಾರೆ.

ದುಬಾರೆ ಆನೆ ಶಿಬಿರಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದು, ಹೊರರಾಜ್ಯದ ಬೇಡಿಕೆಗಳನ್ನು ಆಧರಿಸಿ ಛತ್ತೀಸ್‍ಗಡಕ್ಕೆ ಕಳುಹಿಸಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಇತ್ತ ಮಾವುತರು ಯಾವುದೇ ಕಾರಣಕ್ಕೂ ಸ್ಥಳಾಂತರಿಸದಂತೆ ಪಟ್ಟು ಹಿಡಿದಿದ್ದು, ಸಾಕಾನೆಗಳನ್ನು ಕಾಡಿಗೆ ಅಟ್ಟಿದ್ದಾರೆ. ಮಕ್ಕಳಂತೆ ಸಾಕಿಸಲಹಿದ,ಕುಟುಂಬ ಸದಸ್ಯರಂತೆ ಇರುವ ಹೊರರಾಜ್ಯಕ್ಕೆ ಕಳುಹಿಸುವುದು ಸುತರಾಂ ಇಷ್ಟವಿಲ್ಲ ಎಂದು ಮಾವುತರು ಹೇಳಿದ್ದಾರೆ.

Facebook Comments

Sri Raghav

Admin